ಕ್ರೀಡೆ

ಹೊಸ ವರ್ಷಕ್ಕೆ ಶಿವಲಿಂಗ ಚಿತ್ರವನ್ನು ಪೋಸ್ಟ್ ಮಾಡಿ ಮತ್ತೆ ಟೀಕೆಗೆ ಗುರಿಯಾದ ಮೊಹಮ್ಮದ್ ಶಮಿ

Pinterest LinkedIn Tumblr

ನವದೆಹಲಿ: ಹೊಸ ವರ್ಷದ ಶುಭಾಶಯ ಕೋರಲು ಶಿವಲಿಂಗ ಚಿತ್ರವನ್ನು ಪೋಸ್ಟ್ ಮಾಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.

ಹೊಸ ವರ್ಷದ ಶುಭಾಶಯ ಕೋರಲು ಮೊಹಮ್ಮದ್ ಶಮಿ ಅವರು ಟ್ವೀಟರ್ ನಲ್ಲಿ ಶಿವಲಿಂಗ ಫೋಟೋವನ್ನು ಅಪ್ಲೋಡ್ ಮಾಡಿದ್ದು ಇದು ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಶಮಿಯನ್ನು ಟೀಕಿಸಿ ಹಲವರು ಪೋಸ್ಟ್ ಗಳನ್ನು ಹಾಕಿದ್ದಾರೆ. ನೀವು ಶಿವಲಿಂಗದ ಚಿತ್ರವನ್ನು ಅಪ್ಲೋಡ್ ಮಾಡಿ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ. ಅಲ್ಲಾ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಇನ್ನು ಹೊಸ ವರ್ಷದ ಮೊದಲ ದಿನವೇ ಮೊಹಮ್ಮದ್ ಶಮಿ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಪತ್ನಿಯೊಂದಿಗೆ ಫೋಟೋ ಹಾಗೂ ಮಗಳ ಹುಟ್ಟುಹಬ್ಬದ ಫೋಟೋ ಹಾಕಿದ್ದ ಶಮಿ ಅವರನ್ನು ಮುಸ್ಲಿಂ ವಿರೋಧಿ ಎಂದು ಟೀಕೆಗೆ ಗುರಿಯಾಗಿದ್ದರು.

Comments are closed.