ರಾಷ್ಟ್ರೀಯ

ಇಶ್ರತ್‌ ಜಹಾನ್‌ ಕೇಸ್‌: ಸಮನ್ಸ್‌ ಪ್ರಶ್ನಿಸಿದ IB ಅಧಿಕಾರಿಗಳು

Pinterest LinkedIn Tumblr


ಅಹ್ಮದಾಬಾದ್‌ : ಇಶ್ರತ್‌ ಜಹಾನ್‌ ಫೇಕ್‌ ಎನ್‌ಕೌಂಟರ್‌ ಕೇಸ್‌ನಲ್ಲಿ ಮ್ಯಾಜಿಸ್ಟ್ರೇಟರ ನ್ಯಾಯಾಲಯ ತಮಗೆ ಸಮನ್ಸ್‌ ಜಾರಿ ಮಾಡಿರುವುದನ್ನು ಗುಪ್ತಚರ ದಳದ ಇಬ್ಬರು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಈ ಅಧಿಕಾರಿಗಳಿಬ್ಬರ ಮೇಲ್ಮನವಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಜೆ ಕೆ ಪಂಡ್ಯಾ ಅವರು ಜನವರಿ 6ರಂದು ವಿಚಾರಣೆಗೆ ಎತ್ತಿಕೊಳ್ಳಲಿದ್ದಾರೆ.

ಸಿಬಿಐ ಕೇಸುಗಳ ಮ್ಯಾಜಿಸ್ಟ್ರೇಟರ ಕೋರ್ಟ್‌ ಕಳೆದ ತಿಂಗಳಲ್ಲಿ ಗುಪ್ತಚರ ದಳದ ವಿಶೇಷ ನಿರ್ದೇಶಕ ರಾಜೀಂದರ್‌ ಕುಮಾರ್‌ ಮತ್ತು ಅಧಿಕಾರಿಗಲಾದ ಎಂ ಎಸ್‌ ಸಿನ್ಹಾ , ರಾಜೀವ್‌ ವಾಂಖೇಡೆ ಮತ್ತು ಟಿ ಎಸ್‌ ಮಿತ್ತಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಅಧಿಕಾರಿಗಳನ್ನು ಸಿಬಿಐ ತನ್ನ ಪೂರಕ ಚಾರ್ಜ್‌ ಶೀಟ್‌ನಲ್ಲಿ ಹೆಸರಿಸಿದ್ದು ಆ ಆಧಾರದಲ್ಲಿ ಸಮನ್ಸ್‌ ಜಾರಿಯಾಗಿದೆ ಎಂದು ತಿಳಿದು ಬಂದಿದೆ.

-ಉದಯವಾಣಿ

Comments are closed.