ಮನೋರಂಜನೆ

ನಟ ಕಿಚ್ಚ ಸುದೀಪ್ ತನ್ನ ಪತ್ನಿಗೆ ರೊಮ್ಯಾಂಟಿಕ್ ಟ್ವೀಟ್

Pinterest LinkedIn Tumblr


ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್ ಅವರದು ಅನುರೂಪ ದಾಂಪತ್ಯ. ಇದಕ್ಕೆ ಸಾಕ್ಷಿ ಎಂಬಂತೆ ಸುದೀಪ್ ತಮ್ಮ ಪತ್ನಿಗೆ ರೊಮ್ಯಾಂಟಿಕ್ ಆಗಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಇಂದು ಪ್ರಿಯಾ ಅವರ ಹುಟ್ಟುಹಬ್ಬ.

ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಪ್ರೀತಿಯ ಮಡದಿಗೆ ಶುಭಹಾರೈಸಿದ್ದಾರೆ ಸುದೀಪ್. ಹುಟ್ಟುಹಬ್ಬದ ಶುಭಹಾರೈಕೆಗಳು. ನೀನು ನನ್ನ ಶಕ್ತಿ, ತಾಳ್ಮೆ ಮತ್ತು ಗೌರವದ ಪ್ರತೀಕ. ಎಂದಿಗೂ ನನ್ನ ಪ್ರೀತಿ ಇರುತ್ತದೆ. 2018 ಅದ್ಭುತವಾಗಿರಲಿ ಎಂದು ಹಾರೈಸಿದ್ದಾರೆ.

ಇದಕ್ಕೆ ಪ್ರತಿಯಾರಿ ಪ್ರಿಯಾ ಅವರೂ ಟ್ವೀಟ್ ಮಾಡಿದ್ದು, ಥ್ಯಾಂಕು ಡಾರ್ಲಿಂಗ್ ಹಸ್ಬೆಂಡ್ ಎಂದಿದ್ದಾರೆ. ಸುದೀಪ್ ಅವರೇನೋ ಬಿಗ್ ಬಾಸ್ ಸೇರಿದಂತೆ ಸಿನಿಮಾಗಳಲ್ಲಿ ಬಿಝಿ. ಇಷ್ಟೆಲ್ಲಾ ಬಿಝಿ ಇದ್ದರೂ ಟ್ವೀಟ್ ಮೂಲಕ ತಮ್ಮ ಪ್ರೀತಿಯ ಸಂದೇಶ ರವಾನಿಸಿರುವುದು ಅಭಿಮಾನಿಗಳಿಗೂ ಖುಷಿಕೊಟ್ಟಿದೆ. ಅಭಿಮಾನಿಗಳು ಸುದೀಪ್ ಮತ್ತು ಪ್ರಿಯಾ ಅವರ ಫೋಟೋಗಳನ್ನು ಹಂಚಿಕೊಂಡು ಶುಭಹಾರೈಸಿದ್ದಾರೆ.

Comments are closed.