ಹೊಸದಿಲ್ಲಿ: ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ, ಹೊಸವರ್ಷದಲ್ಲಿ ಮಗದೊಂದು ಉಡುಗೊರೆಯನ್ನು ಗ್ರಾಹಕರಿಗೆ ನೀಡುತ್ತಿದೆ.
ಮಾಸಿಕ ಪ್ಲ್ಯಾನ್ ಟ್ಯಾರಿಫ್ ದರವನ್ನು 50 ರೂ.ಗಳಷ್ಟು ಕಡಿತಗೊಳಿಸಲಾಗಿದೆ. ಹಾಗೆಯೇ ಕೇಲವು ಆಯ್ದ ಪ್ಲಾನ್‌ಗಳಲ್ಲಿ ದಿನಕ್ಕೆ ಡೇಟಾ ಲಿಮಿಟ್ 1ಜಿಬಿಯಿಂದ 1.5 ಜಿಬಿ ವರೆಗೆ ವರ್ಧಿಸಲಾಗಿದೆ.
ಹ್ಯಾಪಿ ನ್ಯೂ ಇಯರ್ 2018 ಆಫರ್‌ಗಳ ಭಾಗವಾಗಿ ಜಿಯೋ ಹೊಸ ಸೇವಾಶುಲ್ಕವನ್ನು ಪ್ರಕಟಿಸಿದೆ.
ಅಂದರೆ ಹೊಸ ಪ್ಲಾನ್ ಪ್ರಕಾರ ಈಗ ಚಾಲ್ತಿಯಲ್ಲಿರುವ ಮಾಸಿಕ 199 ರೂ., 399 ರೂ., 459 ರೂ., ಹಾಗೂ 499 ರೂ. ಪ್ಲಾನ್‌ಗಳಲ್ಲಿ 50 ರೂ.ಗಳ ಇಳಿಕೆ ಕಂಡುಬರಲಿದೆ. ಹಾಗೆಯೇ ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.
ಈ ಎಲ್ಲ ಪ್ಲಾನ್‌ಗಳಲ್ಲಿ ಅನಿಯಮಿತ ಕಾಲಿಂಗ್ ಜತೆ ಎಸ್ಎಂಎಸ್ ಹಾಗೂ ಉಚಿತ ರೋಮಿಂಗ್ ಸೇವೆಯು ಇರಲಿದೆ.
ಕೆಲವು ದಿನಗಳಷ್ಟೇ ಹಿಂದೆಯಷ್ಟೇ ನೂತನ 199 ರೂ. 299 ರೂ.ಗಳ ಹೊಸ ಪ್ಲಾನ್‌ಗಳನ್ನು ಜಿಯೋ ಪ್ರಕಟಿಸಿತ್ತು.
Comments are closed.