ಮಂಗಳೂರು, ಜನವರಿ.22: ಮಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಮತ್ತೊಂದು ಹೆಣ ಬಿದ್ದಿದೆ. ಗ್ಯಾಂಗ್ವಾರ್ ಗೆ ಸಂಬಂಧ ಪಟ್ಟಂತೆ ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ಬೊಕ್ಕಪಟ್ಣ ನಿವಾಸಿ ಕರುಣಾಕರ ಎಂಬವರ ಪುತ್ರ ಶಿವರಾಜ್ ಕರ್ಕೇರ (45) ಎಂದು ಗುರುತಿಸಲಾಗಿದೆ. ಮೃತರು ಕುಖ್ಯಾತ ರೌಡಿ ಪ್ರದೀಪ್ ಮೆಂಡನ್ ಗ್ಯಾಂಗ್ನ ರೌಡಿ ಶೀಟರ್ ಭರತೇಶ್ ಎಂಬಾತನ ಅಣ್ಣ ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವರಾಜ್
ಶಿವರಾಜ್ ಅವರ ಮನೆ
ತಣ್ಣೀರು ಬಾವಿಯಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್ ಕರ್ಕೇರ ಅವರನ್ನು ಸೋಮವಾರ ಮುಂಜಾನೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದೊಂದು ಗ್ಯಾಂಗ್ವಾರ್ ಪ್ರಕರಣವಾಗಿದ್ದು, ಭರತೇಶ್ ಮೇಲಿನ ದ್ವೇಷದಲ್ಲಿ ಈ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ದುಷ್ಕರ್ಮಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಕೆಲವೇ ಸಮಯದಲ್ಲಿ ಓರ್ವನ ಸೆರೆ..?
ಶಿವರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಕೃತ್ಯ ನಡೆದ ಕೆಲವೇ ಸಮಯದಲ್ಲಿ ಓರ್ವ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣ ಬಲಿ..?
ತಣ್ಣೀರುಬಾವಿಯಲ್ಲಿ ದುಷ್ಕರ್ಮಿಗಳಿಂದ ಇಂದು ಮುಂಜಾನೆ ಶಿವರಾಜ್ ಎಂಬುವವರ ಹತ್ಯೆಯಾಗಿದೆ. ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನನ್ನು ಸಾಯಿಸಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಶಿವರಾಜ್ ಸಹೋದರ ರೌಡಿ ಶೀಟರ್ ಭರತೇಶ್ ಬಿಜೈ ರಾಜ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಭರತೇಶ್ ಮೇಲಿನ ದ್ವೇಷಕ್ಕೆ, ಯಾವುದೇ ಅಪರಾಧ ಪ್ರಕರಣಗಳಲ್ಲೂ ಕಾಣಿಸಿಕೊಳ್ಳದ, ಅಮಾಯಕ ಶಿವರಾಜ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಭರತೇಶ್ ಮೇಲಿನ ದ್ವೇಷಕ್ಕೆ, ಯಾವುದೇ ಅಪರಾಧ ಪ್ರಕರಣಗಳಲ್ಲೂ ಕಾಣಿಸಿಕೊಳ್ಳದ, ಅಮಾಯಕ ಶಿವರಾಜ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
Comments are closed.