ಬೆಂಗಳೂರು: ‘ಮಹದಾಯಿ ವಿಚಾರದಲ್ಲಿ ಮೊದಲು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಮಾಡುವುದನ್ನು ನಿಲ್ಲಿಸಿ, ಪಕ್ಷದ ಸಿದ್ಧಾಂತಗಳನ್ನು ಬದಿಗಿಟ್ಟು ಒಂದೇ ವೇದಿಕೆಯಲ್ಲಿ ಜೊತೆಯಾಗಿ ಹೋರಾಟ ಮಾಡಿ’ ಎಂದು ನಟ ಪ್ರಕಾಶ್ ರೈ ಕರೆ ನೀಡಿದ್ದಾರೆ.
ಸಾಮಾಜಿಕ ತಾಣದಲ್ಲಿ ವಿಡಿಯೋದಲ್ಲಿ ಮಹದಾಯಿಗಾಗಿ ಬಂದ್ ವಿಚಾರದ ಕುರಿತು ಮಾತನಾಡಿರುವ ರೈ ‘ಮಹದಾಯಿ ನೀರು ಕನ್ನಡಿಗರ ಮೂಲಭೂತ ಹಕ್ಕು. ನಮ್ಮ ನೀರನ್ನು ನಾವು ಬಳಸಿಕೊಳ್ಳಬೇಕು’ ಎಂದಿದ್ದಾರೆ.
‘ಕೇಂದ್ರದಲ್ಲಿ ನಮ್ಮ ಪಕ್ಷ ವಿದೆ. ಆ ರಾಜ್ಯದಲ್ಲಿ ನಮ್ಮ ಪಕ್ಷವಿದೆ, ನಾವು ನೀರು ತರುತ್ತೇವೆ ಎನ್ನುವುದು ಶುದ್ಧ ಸುಳ್ಳು’ ಎಂದು ಬಿಜೆಪಿಗೆ ಟಾಂಗ್ ನೀಡಿದರು.
‘ರಾಜಕೀಯ ಪಕ್ಷಗಳು ಮೂಲಭೂತ ಹಕ್ಕುಗಳ ಮೇಲೆ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಿ . ವೋಟಿಗೊಸ್ಕರ ಭಿಕ್ಷೆ ಬೇಡುವುದನ್ನು ಬಿಡಿ’ ಎಂದು ಕಿಡಿ ಕಾರಿದರು.
‘ಎಲ್ಲರು ಒಂದಾಗಿ ಬನ್ನಿ,ನಾವು ಹೋರಾಡುವ.ರೈತರ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದೆ.ಇದು ಬಗೆ ಹರಿಸಲಾಗದ ಸಮಸ್ಯೆಯೇನು ಅಲ್ಲ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
-ಉದಯವಾಣಿ
Comments are closed.