ಕರ್ನಾಟಕ

ಕಾವೇರಿ ಐದನೇ ಹಂತದ ಯೋಜನೆಗೆ ಜೈಕಾ ಜತೆ ಒಪ್ಪಂದ

Pinterest LinkedIn Tumblr


ಬೆಂಗಳೂರು: ಬೆಂಗಳೂರಿಗೆ ಪ್ರತಿನಿತ್ಯ 775 ದಶ ಲಕ್ಷ ಲೀಟರ್‌ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯ ಹಣಕಾಸು ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆ ಯ ಅನುಜ್ಞಾ ತಿಳಿವಳಿಕಾ ಪತ್ರಕ್ಕೆ ಜಪಾನ್‌
ಇಂಟರ್‌ನ್ಯಾಶನಲ್‌ ಕೋ ಆಪರೇಷನ್‌ ಏಜೆನ್ಸಿ ಯ (ಜೈಕಾ) ಮುಖ್ಯ ಪ್ರತಿನಿಧಿ ತಕೇಮಾ ಸಕಮೋಟೋ ಹಾಗೂ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್‌.ಸೆಲ್ವ ಕುಮಾರ್‌ ಬುಧವಾರ ದೆಹಲಿಯಲ್ಲಿ ಸಹಿ ಹಾಕಿದರು. ಈ ಒಡಂಬಡಿಕೆ ಹಿನ್ನೆಲೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಐತಿಹಾಸಿಕ ವೇದಿಕೆ ಸಜ್ಜಾದಂತಾಗಿದೆ.

ಈ ಮಹಾತ್ವಾಕಾಂಕ್ಷೆಯ ಯೋಜನೆಗೆ 5500 ಕೋಟಿ ರೂ. ವೆಚ್ಚವಾಗಲಿದ್ದು,ಜಪಾನ್‌ ಸರ್ಕಾರ ಶೇ 85ರಷ್ಟು ಸಾಲ ನೀಡಲಿದೆ. ಉಳಿದ ಶೇ 15ರಷ್ಟು ಮೊತ್ತದಲ್ಲಿ ಶೇ 7.5ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಹಾಗೂ ಶೇ 7.5ರಷ್ಟು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭರಿಸಲಿದೆ.ಕಾವೇರಿ ಐದನೇ ಹಂತದ ಈ ಯೋಜನೆಯು 4500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ನಗರಕ್ಕೆ ಪ್ರತಿದಿನ 775 ದಶಲಕ್ಷ ಕುಡಿಯುವ ನೀರು ಸರಬರಾಜು ಮಾಡಲಿದೆ. ಜೊತೆಗೆ ಉಳಿದ ಮೊತ್ತದಲ್ಲಿ 225 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಹಾಗೂ ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಒಳಚರಂಡಿ ಸೌಲಭ್ಯ ಒದಗಿಸಲಿದೆ. ಈ
ಯೋಜನೆಯ ನೀಲನಕ್ಷೆ ಒಳಗೊಂಡ ಎಲ್ಲ ರೀತಿಯ ಪೂರ್ವ ಸಿದ್ಧತಾ ಕಾರ್ಯಗಳು ಆರಂಭವಾಗಲಿದ್ದು, 2019ರಿಂದ ಯೋಜನೆಯ ಕಾಮಗಾರಿಗಳಿಗೆ ಚಾಲನೆ ದೊರೆತು 2022ರ ವೇಳೆಗೆ ಯೋಜನೆ ಅಸ್ತಿತ್ವಕ್ಕೆ ಬರಲಿದೆ. ಒಳಚರಂಡಿ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಇದ್ದರು.

-ಉದಯವಾಣಿ

Comments are closed.