ಬೆಂಗಳೂರು: ಈ ಬಾರಿಯ ‘ಬಿಗ್ ಬಾಸ್ ಕನ್ನಡ-5’ ಸೀಸನಿನಲ್ಲಿ ವಿನ್ನರ್ ಆಗಿರುವ ಚಂದನ್ ಶೆಟ್ಟಿಗೆ 50 ಲಕ್ಷ ಸಿಕ್ಕಿದ್ದರೆ, ರನ್ನರ್ ಅಪ್ ಆಗಿರುವ ದಿವಾಕರ್’ಗೆ ಸಿಕ್ಕಿದ್ದೆಷ್ಟು..?
ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ದಿವಾಕರ್’ಗೆ ವ್ಯಾಸಲೀನ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಲಭಿಸಿತು.
ರನ್ನರ್ ಅಪ್ ಟ್ರೋಫಿ ಎರಡನೇ ಸ್ಥಾನ ಪಡೆದ ದಿವಾಕರ್ ‘ರನ್ನರ್ ಅಪ್’ ಟ್ರೋಫಿಯನ್ನ ಎತ್ತಿ ಹಿಡಿದರು. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದ ದಿವಾಕರ್ ಗೆ ‘ಸೆರಾ’ ಕಡೆಯಿಂದ ಬಹುಮಾನದ ರೂಪದಲ್ಲಿ ಒಂದು ಲಕ್ಷ ರೂಪಾಯಿ ನೀಡಲಾಯ್ತು. ದಿವಾಕರ್ ಗೆ ಸೂಟ್ ”ಕೋಟು ಸೂಟು ಬೂಟು ಎಲ್ಲ ತೆಗೆದುಕೊಂಡು ಹೋಗಬಹುದಾ” ಅಂತ ‘ಬಿಗ್ ಬಾಸ್’ ಗೆ ದಿವಾಕರ್ ಕೇಳಿಕೊಳ್ಳುತ್ತಿದ್ದರು. ಹೀಗಾಗಿ, ಫಿನಾಲೆ ದಿನ ದಿವಾಕರ್ ಧರಿಸಿದ್ದ ಸೂಟ್ ನ ತಮ್ಮ ಬಳಿಯೇ ಇಟ್ಟುಕೊಳ್ಳಲು ಸುದೀಪ್ ಅನುಮತಿ ನೀಡಿದರು.
Comments are closed.