ಕುಂದಾಪುರ : ಕಾಳಾವರ ಗ್ರಾಮ ರೈಲ್ವೆ ಬ್ರಿಜ್ ಪಕ್ಕದಲ್ಲಿರುವ ತೆಂಗಿನ ತೋಟಕ್ಕೆ ಮಂಗಳವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಅಗ್ನಶಾಮಕ ದಳ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.
ಶಾನಾಡಿ ಶಂಕರ ಹೆಗ್ಡೆ ಎಂಬವರ ತೆಂಗಿನ ತೋಟಕ್ಕೆ ಬೆಂಕಿ ಬಿದ್ದು ದೊಡ್ಡ ಹೊಗೆ ಕಂಡ ಪರಿಸರದ ನಿವಾಸಿಗಳು ಕುಂದಾಪುರ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಅಗ್ನಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಬಿಂಕಿಗೆ ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ. ಬೆಂಕಿ ಅನಾಹುತಕ್ಕೆ ಕೆಲವು ತೆಂಗಿನ ಮರಗಳಿಗೂ ಹಾನಿಯಾಗಿದೆ.
Comments are closed.