ಮಕ್ಕಳು ಜಗತ್ತನ್ನ ಅರಿಯುವುದು ಸ್ಪರ್ಶಿಸುವುದರಿಂದ, ಅನುಭವಿಸುವುದರಿಂದ ಮತ್ತು ವಸ್ತುಗಳನ್ನ ಬಾಯಲ್ಲಿ ಇಟ್ಟುಕೊಳ್ಳುವುದರ ಮೂಲಕ. ಬಾಹ್ಯ ಪದಾರ್ಥಗಳನ್ನ ಒಳಸೇವಿಸುವುದೇ ಮಕ್ಕಳು ಜಗತ್ತಿನ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕಂಡುಕೊಳ್ಳುವ ದಾರಿ. ಚಿಕ್ಕ ಚಿಕ್ಕ ವಸ್ತುಗಳಾದ ನಾಣ್ಯ, ಬ್ಯಾಟರಿ, ಬಟನ್ ಗಳು ಮಕ್ಕಳ ಕೈಗೆ ಸುಲಭವಾಗಿ ಸಿಗುವುದರಿಂದ, ನೋಡಲು ಅವರಿಗೆ ಆಕರ್ಷಕವಾಗಿ ಕಾಣುವುದರಿಂದ, ಅವರು ಅವುಗಳನ್ನ ನುಂಗುವುದು ಸಾಮಾನ್ಯ ಸನ್ನಿವೇಶವಾಗಿದೆ.
ಮಗುವು ನಾಣ್ಯ ನುಂಗಿದ್ದರೆ ಹೇಗೆ ಗೊತ್ತಾಗುತ್ತದೆ?
ಒಂದು ವೇಳೆ ನಿಮ್ಮ ಮಗುವು ನಾಣ್ಯವನ್ನ ನುಂಗಿದೆ ಎಂದರೆ ನೀವು ನಿಮ್ಮ ಮಗುವಿನ ಮೇಲೆ ತುಂಬಾ ತೀಕ್ಷ್ಣವಾದ ಕಣ್ಣಿಟ್ಟಿರಬೇಕು. ನಾಣ್ಯವು ಮಗುವಿನ ಕರುಳನ್ನ ಸಂಚರಿಸಿ ಮಲದಲ್ಲಿ ಹೊರಬಹುದು, ಅಥವಾ ಕೆಲವೊಮ್ಮೆ ಅದು ನಾಳಗಳಲ್ಲಿ ಸಿಲುಕಿಕೊಂಡು ಮಗುವಿಗೆ ತೀವ್ರ ತೊಂದರೆ ಉಂಟು ಮಾಡಬಹುದು. ಒಂದು ವೇಳೆ ನಿಮ್ಮ ಮಗುವಿನ ಶ್ವಾಸ ಅಥವಾ ಊಟದ ನಾಳದಲ್ಲಿ ನಾಣ್ಯವು ಸಿಲುಕಿ ಹಾಕಿಕೊಂಡಿದ್ದರೆ, ನೀವು ನಿಮ್ಮ ಮಕ್ಕಳಲ್ಲಿ ಈ ಕೆಳಗಿನ ಲಕ್ಷಣಗಳನ್ನ ಗುರುತಿಸಬಹುದು.
೧. ನಿಮ್ಮ ಮಗುವು ನಿರಂತರವಾಗಿ ಜೊಲ್ಲು ಸುರಿಸುತ್ತಲೇ ಇರುತ್ತದೆ. ಬಹುಕಾಲದಿಂದ ಜೊಲ್ಲು ಸುರಿಸುತ್ತಲೇ ಇದ್ದರೆ, ಅಲ್ಲಿ ಏನೋ ಒಂದು ಸಮಸ್ಯೆ ಇದೆ ಎಂದರ್ಥ.
೨. ಮಗುವಿಗೆ ಏನನ್ನು ನುಂಗಲು ಆಗುವುದಿಲ್ಲ. ಈ ಕಾರಣದಿಂದ ಅವರು ನೀರು, ಆಹಾರವನ್ನ ಹಸಿವು ಆಗಿದ್ದರೂ ತಿರಸ್ಕರಿಸಬಹುದು.
೩. ಅತಿಯಾಗಿ ವಾಂತಿ ಮಾಡುವುದನ್ನ ಕಾಣಬಹುದು.
೪. ಮಗುವು ತನ್ನ ಕತ್ತು ಅಥವಾ ಎದೆಯಲ್ಲಿ ನೋವಾಗುತ್ತಿದೆ ಎಂದು ಗೋಳಿಡಬಹುದು.
೫. ಇದಕ್ಕಿದ್ದ ಹಾಗೆ ಜ್ವರ ಶುರು ಆಗುವುದು.
ನಾಣ್ಯವು ಎಷ್ಟು ಸಮಯದ ನಂತರ ಹೊರಬರುತ್ತದೆ?
ನೀವು ಈಗ ನಿಮ್ಮ ಮಗುವು ನಾಣ್ಯ ನುಂಗಿದೆ ಎಂದು ನೀವು ಈಗ ಆತಂಕಕ್ಕೆ ಒಳಗಾಗುತ್ತೀರ. 80% – 90% ಅಷ್ಟು ಸಮಯ ನುಂಗಿದ ನಾಣ್ಯವು ಯಾವುದೇ ತೊಂದರೆ ಇಲ್ಲದೆ ಮಗುವಿನ ದೇಹದಿಂದ ಹೊರಬರುತ್ತದೆ. ನಾಣ್ಯವು ಮಗುವಿನ ಜೀರ್ಣನಾಳದ ಒಳಗೆ ಸಂಚರಿಸಿ ಒಂದೆರೆಡು ದಿನಗಳಲ್ಲಿ ಮಲದಲ್ಲಿ ಹೊರಬರುತ್ತದೆ. ಆದರೆ ಕೆಲವೊಂದು ಬಾರಿ ಹಾಗೆ ಆಗದೆ ಇರಬಹುದು. ಇಂತಹ ಸಮಯದಲ್ಲಿ ಕೆಲವು ಮೆಡಿಕಲ್ ಎಮರ್ಜೆನ್ಸಿ ಸನ್ನಿವೇಶ ಉಂಟಾಗುವಂತಹ ಹಾನಿ ಎದುರಾಗಬಹುದು.
ಒಂದು ವೇಳೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಅದು ಎಮರ್ಜೆನ್ಸಿ ಎಂದರ್ಥ :
೧. ನಿಮ್ಮ ಮಗುವಿಗೆ ಮಾತಾಡಲು, ಅಳಲು ಆಗುವುದಿಲ್ಲ ಮತ್ತು ಉಸಿರಾಡಲು ಕಷ್ಟ ಪಡುತ್ತದೆ.
೨. ಮಗುವು ಜೊಲ್ಲು ಸುರಿಸುತ್ತಿದ್ದು ಏನನ್ನು ಸೇವಿಸಲು ಆಗುತ್ತಿಲ್ಲ.
೩. ನಿಮ್ಮ ಮಗುವು ಕೆಮ್ಮುತಿದೆ ಅಥವಾ ಜೋರಾಗಿ ಉಸಿರಾಡುತ್ತಿದೆ.
೪. ನಿಮ್ಮ ಮಗುವಿಗೆ ಉಸಿರುಗಟ್ಟುತ್ತಿರುವುದನ್ನ ನೀವು ಕಾಣಬಹುದು.
೫. ಜ್ಞಾನ ತಪ್ಪುವುದು, ನಿರಂತರವಾಗಿ ವಾಂತಿ ಮಾಡುವುದು.
ಒಂದು ವೇಳೆ ಈ ಲಕ್ಷಣಗಳು ಕಾಣಿಸುತ್ತಿಲ್ಲ ಎಂದರೆ, ನಿಮ್ಮ ಮಗುವಿಗೆ ಏನು ತೊಂದರೆ ಆಗಿಲ್ಲ ಎಂದು ಮತ್ತು ನಾಣ್ಯವು ಇನ್ನೂ 4-5 ದಿನಗಳಲ್ಲಿ ಹೊರಬರುವುದು ಎಂದರ್ಥ. ಒಂದು ವೇಳೆ ಈ ಮೇಲಿನ ಲಕ್ಷಣಗಳೇನಾದರೂ ಕಾಣಿಸಿಕೊಂಡರ್, ತಡ ಮಾಡದೆ ವೈದ್ಯರ ಬಳಿಗೆ ಕರೆದೊಯ್ಯಿರಿ.
ನಾಣ್ಯ ನುಂಗಿದೊಡನೆ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು?
೧. ಮಗುವಿಗೆ ನಾರಿನಾಂಶ ಉಳ್ಳ ಮತ್ತು ಮೃದುವಾದ ಆಹಾರವನ್ನ ನೀಡಿ. ನಿಮ್ಮ ಮಗುವಿನ ಕರುಳಿನಲ್ಲಿ ಸಂಚಾರ ವೇಗವಾಗಿ ಆಗಬೇಕೆಂದರೆ, ಬಾಳೆಹಣ್ಣು ಉತ್ತಮ ಆಯ್ಕೆ.
೨. ನಿಮ್ಮ ಮಗುವಿಗೆ ಹೆಚ್ಚೆಚ್ಚು ನೀರು ಕುಡಿಸಿ ಅವರು ಜಲೀಕರಣ ಹೊಂದಿರುವಂತೆಯೇ ನೋಡಿಕೊಳ್ಳಿ. ಜಲೀಕರಣ ಹೊಂದಿರುವ ದೇಹವು ಹೆಚ್ಚು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ಒಂದು ವೇಳೆ ನಿಮ್ಮ ಮಗುವೇನಾದರೂ ನಾಣ್ಯ ನುಂಗಿರುವುದು ತಿಳಿದು ಬಂದರೆ, ನೀವು ಇವುಗಳನ್ನ ಮಾಡಲೇ ಬೇಡಿ –
೧. ಒತ್ತಾಯ ಮಾಡಿ ವಾಂತಿ ಮಾಡಿಸುವುದು
೨. ಮಗುವಿಗೆ ತಿನ್ನಲು ಅಥವಾ ಕುಡಿಯಲು ಏನಾದರು ಕೊಡುವುದು
ಒಂದು ವೇಳೆ ನಿಮ್ಮ ಮಗುವು ಯಾವುದಾದರು ಮೃದುವಾದ, ಚಿಕ್ಕದಾದ ಮತ್ತು ವಿಷಕಾರಿ ಅಲ್ಲದ ವಸ್ತುವನ್ನ ನುಂಗಿದ್ದರೆ, ನೀವು ಈ ಕೆಳಗಿನ ಸಲಹೆಗಳನ್ನ ಪಾಲಿಸಬೇಕು
೧. ಮುಂದಿನ 2-3 ದಿನಗಳ ಕಾಲ ಮಗುವಿನ ಮಲವನ್ನ ಪರೀಕ್ಷಿಸಿ. ಮಲದ ಮೇಲೆ ನೀರನ್ನು ಹಾಕಿ, ಅದರೊಳಗೆ ಮಗುವು ನುಂಗಿದ ವಸ್ತು ಆಚೆ ಬಂದಿದೆಯೇ ಎಂದು ನೋಡಿ.
೨. ನಾಣ್ಯವನ್ನ ಮಗುವು ನುಂಗಿದೆ ಎಂದರೆ, ನೀವು ಅವರ ಮೇಲಿಂದ ಒಂದು ಕ್ಷಣವೂ ಕಣ್ಣನ್ನು ತೆಗೆಯುವಂತಿಲ್ಲ.
ನಾಣ್ಯ ನುಂಗುವುದಕ್ಕೆ ಚಿಕಿತ್ಸೆ
ಒಂದು ವೇಳೆ ನಾಣ್ಯವು ನೀವು ಮೇಲೆ ಹೇಳಿದ ಎಲ್ಲಾ ಸಲಹೆಗಳನ್ನ ಪಾಲಿಸಿದ ನಂತರವೂ ಹೊರಬರಲಿಲ್ಲ ಎಂದರೆ, ನಾಣ್ಯವು ಮಗುವಿನ ದೇಹ ಸೇರಿ ಎರಡು ದಿನಗಳ ಕಾಲ ಆಗಿದೆ ಎಂದರೆ, ನಿಮ್ಮ ಮಗುವಿಗೆ ಯಾವುದೇ ರೀತಿಯ ತೊಂದರೆಗಳು ಕಾಣಿಸಿಕೊಂಡಿಲ್ಲ ಎಂದರೂ ನೀವು ಆಸ್ಪತ್ರೆಗೆ ತೆರಳಬೇಕು. ನಿಮ್ಮ ವೈದ್ಯರನ್ನ ಭೇಟಿ ಮಾಡಿ ವೈದ್ಯಕೀಯ ಸಹಾಯ ಪಡೆದುಕೊಳ್ಳಿ. ವೈದ್ಯರು ನಿಮಗೆ ಇನ್ನಷ್ಟು ಸಮಯ ಕಾಯಲು ಹೇಳಬಹುದು ಅಥವಾ ನಿಮ್ಮ ಮಗುವು ನಾಣ್ಯವನ್ನ ಹೊರಹಾಕಲು ಸಹಾಯ ಮಾಡುವ ಔಷಧಿಯನ್ನ ನೀಡಬಹುದು. ವೈದ್ಯರು X-ರೇ ಮೂಲಕ ನಾಣ್ಯವು ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸರ್ಜರಿ ಏನು ಬೇಡವಾಗಿರುತ್ತದೆ, ಆದರೆ ಮಗುವು ನಾಣ್ಯದ ಬದಲಾಗಿ ಬೇರೆ ಯಾವುದೊ ಚೂಪಾದ ವಸ್ತುವನ್ನ ನುಂಗಿದ್ದರೆ, ಅದು ನಿಮ್ಮ ಮಗುವಿನ ಆಂತರಿಕ ಅಂಗಗಳಿಗೆ ಹಾನಿ ಉಂಟು ಮಾಡಬಹುದು.
Comments are closed.