https://www.youtube.com/watch?v=aIhzYY3SheQ
ದಾಲ್ಚಿನ್ನಿ ಚಕ್ಕೆಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ, ಶರೀರದ ಮೇಲಾಗುವ ಪರಿಣಾಮಗಳ ಬಗ್ಗೆ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಈ ಹಾಲನ್ನು ತಯಾರಿಸುವುದು ಬಹಳ ಸುಲಭ. ಒಂದು ಕಪ್ಪು ಹಾಲಿಗೆ ಎರಡು ಚಮಚ ದಾಲ್ಚಿನ್ನಿ ಚಕ್ಕೆ ಬೆರೆಸಿ ಕುಡಿಯಬೇಕಷ್ಟೇ. ಇದನ್ನು ಕುಡಿಯುವುದರಿಂದ ಸಕ್ಕರೆ ಖಾಯಿಲೆ ಗುಣವಾಗುತ್ತದೆ ಪ್ರತೀ ದಿನ ಇದನ್ನು ಸೇವಿಸುವುದರಿಂದ ಎಂತಹ ಪರಿಣಾಮಗಳು ಲಭಿಸಲಿವೆಯೆಂದು ಈಗ ನೋಡೋಣ…
ದಾಲ್ಚಿನ್ನಿ ಚಕ್ಕೆ ಹಾಲು ಕುಡಿಯುವುದರಿಂದ ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ. ಗ್ಯಾಸ್ಟ್ರೋ ಇಂಟೆಸ್ಟಿನಲ್ ಸ್ಪಾಮ್ ಅನ್ನು ಇದು ಸುಲಭವಾಗುವಂತೆ ಮಾಡಿ, ಹೊಟ್ಟೆಯಲ್ಲಾಗುವ ಅಸೌಕರ್ಯವನ್ನು ತಡೆಗಟ್ಟಿ… ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ.
ಟೈಪ್ 2 ಡಯಾಬಿಟೀಸ್ ಇರುವವರು ಈ ಹಾಲನ್ನು ಪ್ರತೀನಿತ್ಯ ಸೇವಿಸಿದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ.
ದಾಲ್ಚಿನ್ನಿ ಚಕ್ಕೆ ಹಾಲನ್ನು ಕುಡಿದರೆ… ಚೆನ್ನಾಗಿ ನಿದ್ದೆ ಬರುತ್ತದೆ. ರಾತ್ರಿ ಮಲಗುವುದಕ್ಕೆ ಮುನ್ನ ಒಂದು ಲೋಟ ದಾಲ್ಚಿನ್ನಿ ಚಕ್ಕೆ ಹಾಲು ಕುಡಿದರೆ..ಚಿಕ್ಕ ಮಕ್ಕಳಂತೆ ಸಂತೋಷವಾಗಿ ನಿದ್ರಿಸಬಹುದು.
ಚರ್ಮಕ್ಕೆ ಹಾಗೂ ಕೂದಲಿನ ಬೆಳವಣಿಗೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮ ಹಾಗೂ ಕೂದಲಿಗೆ ಬಹಳ ಒಳ್ಳೆಯದು. ಸುಂದರವಾದ ಕೂದಲು, ಕಾಂತಿಯುತವಾದ ಚರ್ಮವನ್ನು ಬಯಸುವವರು ದಾಲ್ಚಿನ್ನಿ ಚಕ್ಕೆ ಹಾಲನ್ನು ಕುಡಿಯಬೇಕು.
ವಯಸ್ಸಾದವರು ಈ ಹಾಲನ್ನು ಕುಡಿಯುವುದರಿಂದ ಕೀಲುನೋವು ,ಮೂಳೆಗಳ ಸಮಸ್ಯೆ ನಿವಾರಣೆಯಾಗುತ್ತವೆ.
ಸಾಮಾನ್ಯವಾದ ಕೆಮ್ಮು, ಫ್ಲೂ ಮುಂತಾದುವನ್ನು ನಿವಾರಿಸಲು ದಾಲ್ಚಿನ್ನಿ ಚಕ್ಕೆ ಹಾಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೊಂಕು ಹತ್ತಿರ ಸುಳಿಯದಂತೆ ಮಾಡುತ್ತದೆ. ಬ್ಯಾಕ್ಟೀರಿಯಾಗಳನ್ನು ತೊಲಗಿಸಿ… ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
Comments are closed.