ಅಂತರಾಷ್ಟ್ರೀಯ

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿ ಬಲಿಷ್ಠ, ಸಮರ್ಥವಾಗಿದೆ: ಚೀನಾದ ಚಿಂತಕರ ಚಾವಡಿ ಮೆಚ್ಚುಗೆ

Pinterest LinkedIn Tumblr

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿ ಬಲಿಷ್ಠ ಹಾಗೂ ಸಮರ್ಥವಾಗಿದೆ ಎಂದು ಚೀನಾದ ಚಿಂತಕರ ಚಾವಡಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಸರ್ಕಾರಿ ಸ್ವಾಮ್ಯದ ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ಇದಾಗಿದ್ದು, ಚೀನಾದ ಅಂತಾರಾಷ್ಟ್ರೀಯ ವಿಷಯಗಳ ಬಗೆಗಿನ ಅಧ್ಯಯನ ಸಂಸ್ಥೆಯಲ್ಲಿ ಚೀನಾದ ವಿದೇಶಾಂಗ ಇಲಾಖೆಯ ಭಾಗವಾಗಿರುವ ಥಿಂಕ್ ಟ್ಯಾಂಕ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೊಸ ಸನ್ನಿವೇಶದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರಗಳಿಲಿಸಲು ಮೋದಿಯ ಸಿದ್ಧಾಂತ ಕೆಲಸ ಮಾಡುತ್ತಿದ್ದು, ವಿದೇಶಾಂಗ ನೀತಿಯಲ್ಲಿ ಭಾರತ ಮತ್ತಷ್ಟು ಬಲಿಷ್ಠ ಹಾಗೂ ಸಮರ್ಥವಾಗಿದೆ ಎಂದು ಸಿಐಐಎಸ್ ನ ಉಪಾಧ್ಯಕ್ಷ ರಾಂಗ್ ಯಿಂಗ್ ಹೇಳಿದ್ದಾರೆ.

ಸಿಐಐಎಸ್ ಜರ್ನಲ್ ನಲ್ಲಿ ಈ ಬಗ್ಗೆ ಲೇಖನ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಇದೇ ಮೊದಲ ಬಾರಿಗೆ ಚೀನಾದ ಅಂತಾರಾಷ್ಟ್ರೀಯ ವ್ಯವಹಾರಗಳ ಅಧ್ಯಯನಕ್ಕೆ ಸಂಬಂಧಿಸಿದ ಜರ್ನಲ್ ಲೇಖನ ಪ್ರಕಟಿಸಿದೆ.

Comments are closed.