ಮಂಗಳೂರು, ಫೆಬ್ರವರಿ.01:ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರದ ಕುಲಶೇಖರದ ಶಾಲೆಯಲ್ಲಿ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪಿಲಿಕುಳ ವಿಜ್ಞಾನ ಕೇಂದ್ರದ ವತಿಯಿಂದ ನೂರಾರು ಮಂದಿ ಆಸಕ್ತರಿಗೆ ಗ್ರಹಣ ವೀಕ್ಷಣೆ ಮಾಡಿಸಲಾಯಿತು.
ರಾತ್ರಿ 7.37 ಗಂಟೆಗೆ ಖಂಡಗ್ರಾಸ ಚಂದ್ರ ಗ್ರಹಣ ಪೂರ್ಣಗೊಂಡು 8.57ಗಂಟೆಗೆ ಗ್ರಹಣ ಕಳೆದು ಹೊಳೆಯುವ ಪೂರ್ಣ ಚಂದ್ರ ಬಾಳಿನಲ್ಲಿ ಗೋಚರಿಸಿತು. ಹವ್ಯಾಸಿ ಖಗೋಳ ತಜ್ಞ ರಾದ ಜಯಂತ್ ಹಾಗೂ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ.ರಾವ್ ನರೆದಿದ್ದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಚಂದ್ರಗ್ರಹಣ ದ ಬಗ್ಗೆ ಹಾಗೂ ಆಕಾಶ ಕಾಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿದರು.
ಗ್ರಹಣದಿಂದಾಗಿ ಸಂಜೆ ವೇಳೆ ಮಂಗಳೂರಿನ ಬೀದಿ ಬಹುತೇಕ ನಿರ್ಜನವಾಗಿತ್ತು. ಅಂಗಡಿ, ಮುಂಗಟ್ಟುಗಳು ಕೆಲ ಮುಚ್ಚಿದ್ದರೆ, ತೆರೆದಿದ್ದ ಅಂಗಡಿ, ಹೋಟೆಲ್ಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಗ್ರಹಣ ಬಿಟ್ಟ ಬಳಿಕ ಮನೆಯಲ್ಲಿ ತೀರ್ಥ ಸಂಪೋಕ್ಷಣೆ ಮಾಡಿ ಬಳಿಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು.
ಚಂದ್ರ ಗ್ರಹಣದ ಪ್ರಯುಕ್ತ ಮಂಗಳೂರು ನಗರದ ಹಲವೆಡೆ ದೇವಸ್ಥಾನಗಳಲ್ಲಿ ಸ್ವಚ್ಛತೆ ನೆರವೇರಿತು. ನಗರದ ಶ್ರೀ ಬ್ರಹ್ಮಬೈದರ್ಕಳ ಗರಡಿ ಶ್ರೀ ಕ್ಷೇತ್ರದಲ್ಲಿ ನೀರು ಹಾಯಿಸುವ ಮೂಲಕ ಶುದ್ಧಿಗೊಳಿಸಲಾಯಿತು.
ಮಸೀದಿಯಲ್ಲೂ ವಿಶೇಷ ಪ್ರಾರ್ಥನೆ :
ಚಂದ್ರಗ್ರಹಣ ಪ್ರಯುಕ್ತ ಬುಧವಾರ ಸಂಜೆ ಮಂಗಳೂರು ನಗರ ಹಾಗೂ ಹೊರವಲಯದ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಝ್ ಹಾಗೂ ಖುತ್ಬಾ ನೆರವೇರಿದವು.
ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಚಂದ್ರಗ್ರಹಣ ಪ್ರಯುಕ್ತ ವಿಶೇಷ 2 ರಖಾತ್ ನಮಾಜ್ ಹಾಗೂ ಕುತುಬಾ ಪಾರಾಯಣ ಜಮಾತ್ನ ಇಮಾಮರಾದ ಬಹು ಇಲ್ಯಾಸ್ ಹಮ್ಜಾದಿ ನೇತೃತ್ವದಲ್ಲಿ ನಡೆಯಿತು.
Comments are closed.