ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂಗಳವಾರ ಸಂಜೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಫೆ.2 ಶುಕ್ರವಾರ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ.
ಶುಕ್ರವಾರ ಸಂಜೆ ಬೆಂಗಳೂರಿನ ಮಲ್ಲೆಶ್ವರಂನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಶೆಟ್ಟಿ ಅವರು ನಿಸ್ವಾರ್ಥದಿಂದ ಬಿಜೆಪಿ ಸೇರುತ್ತಿದ್ದು ಈ ಹಿಂದೆ ಪಕ್ಷ ತೊರೆದರೂ ಕೂಡ ಅಭಿಮಾನ ಕಮ್ಮಿಯಾಗಿರಲಿಲ್ಲ. ಬಿಜೆಪಿಯ ಋಣ ನನ್ನ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಅತ್ಯಂತ ಗೌರವ ಇದೆ. ಕ್ಷೇತ್ರದ ಜನರ ಇಚ್ಛೆ ಕೂಡ ನಾನು ಬಿಜೆಪಿ ಸೇರುವುದಾಗಿದ್ದು ಯಾವುದೇ ಸ್ಥಾನ ಹಾಗೂ ಟಿಕೆಟ್ ಆಕಾಂಕ್ಷೆಯಿಂದ ಪಕ್ಷ ಸೇರುತ್ತಿಲ್ಲ ಎಂದು ಹೇಳಿದರು.
ಇಂದು ಕುಂದಾಪುರದಲ್ಲಿ ಕಾಂಗ್ರೆಸ್ ಪ್ರತಿಭಟನೆ…
ರಾಜ್ಯ ಸರಕಾರದಿಂದ ಬಜೆಟ್ ಮಂಡನೆಯಾಗುವ ಈ ಮಹತ್ವದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅಗತ್ಯದ ಅನುಧಾನವನ್ನು ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉತ್ತಮ ಅವಕಾಶಗಳಿದ್ದಾಗ್ಯೂ ಶಾಸಕ ಹಾಲಾಡಿ ಶ್ರೀವಾಸ ಶೆಟ್ಟಿಯವರು ಕ್ಷೇತ್ರದ ಶಾಸಕ ಸ್ಥಾನಕ್ಕೆ ಅವಧಿಗೆ ಮುಂಚಿತವಾಗಿ ರಾಜೀನಾಮೆ ನೀಡುವ ಮೂಲಕ ಕ್ಷೇತ್ರದ ಜನತೆಗೆ ವಿಶ್ವಾಸ ದ್ರೋಹ ಬಗೆದಿದ್ದಾರೆ ಎಂದು ರಾಜ್ಯ ಇಂಟಕ್ ಅಧ್ಯಕ್ಢ ರಾಕೇಶ್ ಮಲ್ಲಿ ಆರೋಪಿಸಿದ್ದು ಇದನ್ನು ವಿರೋಧಿಸಿ ಕುಂದಾಪುರ ಬ್ಲಾಕ್ ಕಾಂಗ್ರೇಸ್, ಕೋಟ ಬ್ಲಾಕ್ ಕಾಂಗ್ರೇಸ್, ಕುಂದಾಪುರ ಇಂಟಕ್ ಸಂಸ್ಥೆಗಳ ನೇತೃತ್ವದಲ್ಲಿ ಫೆಬ್ರವರಿ 1 ರ ಗುರುವಾರ ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ: ಶೀಘ್ರವೇ ಬಿಜೆಪಿ ಸೇರ್ಪಡೆ
ರಾಜೀನಾಮೆ ನೀಡಿ ಕುಂದಾಪುರ ಕ್ಷೇತ್ರವನ್ನು ಅನಾಥವಾಗಿಸಿದ ಹಾಲಾಡಿ: ರಾಕೇಶ್ ಮಲ್ಲಿ ಆರೋಪ
Comments are closed.