ಗಲ್ಫ್

ದುಬೈಯಲ್ಲಿಂದು ನಡೆಯುತ್ತಿದೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರಧಾನ ಸಮಾರಂಭ

Pinterest LinkedIn Tumblr

ದುಬೈ: ಎಚ್‌ಎಮ್‌ಸಿ(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ) ಯುನೈಟೆಡ್ ಆಶ್ರಯದಲ್ಲಿ ಗುರುವಾರ ಸಂಜೆ (ಫೆಬ್ರವರಿ 1 )ಯುಎಇಯಲ್ಲಿ ಸಮಾಜದ ಶಾಂತಿ-ಸಹಬಾಳ್ವೆಗೆ ದುಡಿದವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದುಬೈ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಮಿನಲ್ಲಿ ನಡೆಯಲಿರುವ ವರ್ಣ ರಂಜಿತಾ ಕಾರ್ಯಕ್ರಮದಲ್ಲಿ ‘ಮಾರ್ಚ್-22 ” ಸಿನೆಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ, ಸಮಾಜ ಸೇವಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಗಲ್ಫ್ ಮೆಡಿಕಲ್ ಕಾಲೇಜಿನ ಮೊಯ್ದಿನ್ ತುಂಬೆ ಸೇರಿದಂತೆ ಸಮಾಜದಲ್ಲಿ ಶಾಂತಿ-ಸಹಬಾಳ್ವೆಯನ್ನು ಪೋಷಿಸುವವರಿಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಶಕೀಲ್ ಹೊನ್ನಾಳ ಅವರ ಸಾರಥ್ಯದಲ್ಲಿ  ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಒದಗಿಸಲಾಗಿದ್ದು, youtube ಖ್ಯಾತಿಯ ವರುಣ್ ಪ್ರುತಿ, ಬಾಲಿವುಡ್ ಕಾಮಿಡಿಯನ್ ನಾಗೇಶ್ ಕುಮಾರ್, ನಟಿ ಮಿಸ್ ಗುಲ್ಬಹಾರ್ ಕಾರ್ಯಕ್ರಮದಲ್ಲಿ ಎಲ್ಲರನ್ನು ರಂಜಿಸಲಿದ್ದಾರೆ.

RJ ಸಾಹಿಲ್ ಝಹೀರ್ ಹಾಗು RJ ಜೂಟ್ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಜೊತೆಗೆ ವಿವಿಧ ಡ್ಯಾನ್ಸ್ ತಂಡಗಳಿಂದ ಡ್ಯಾನ್ಸ್ ಸೇರಿದಂತೆ ಮನೋರಂಜನಾ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.

Comments are closed.