ಕರಾವಳಿ

ಕೇಂದ್ರ ಸರ್ಕಾರದಿಂದ ರೈತರ ಪರವಾದ ಬಜೆಟ್ ಮಂಡಣೆ : ಸಂಸದ ನಳಿನ್‌ಕುಮಾರ್ ಕಟೀಲ್ ಹರ್ಷ

Pinterest LinkedIn Tumblr

ಮಂಗಳೂರು : ಕೇಂದ್ರ ಸರ್ಕಾರ ರೈತರ ಪರವಾದ ಬಜೆಟ್ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಬಜೆಟ್ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಅನುಕೂಲಗಳನ್ನು ಕಲ್ಪಿಸಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ರೈತರ ಕಿಸಾನ್ ಕಾರ್ಡ್ ಮೀನುಗಾರರಿಗೂ ವಿಸ್ತರಣೆ. ರೈತ ಮಾರುಕಟ್ಟೆ ಸರಳ ಸಂಪರ್ಕ ಯೋಜನೆ., ಕೃಷಿ ವಸ್ತು ರಫ್ತು ಮೇಲಿನ ನಿರ್ಬಂಧ ತೆರವು, ಕೃಷಿಗಾಗಿಯೇ ಒಂದು ಲಕ್ಷ ಕೋಟಿ ಸಾಲ ನೀಡುವ ಗುರಿ ರೈತರ ಅಭಿವೃದ್ಧಿಗೆ ಪೂರಕವಾಗಿದೆ.

10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡುವುದು ಐತಿಹಾಸಿಕ ಕ್ರಮವಾಗಿದೆ. ಆಮದು ಗೇರು ಬೀಜ ಮೇಲಿನ ಕಸ್ಟಮ್ ಸುಂಕ ಶೇ.5 ರಿಂದ ಶೇ.2.5ಕ್ಕೆ ಇಳಿಕೆ ಮಾಡಿರುವುದು, ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜು , ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ. 24 ಹೊಸ ಮೆಡಿಕಲ್ ಕಾಲೇಜುಗಳ ಘೋಷಣೆ. 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸೌಲಭ್ಯ , ಬೆಂಗಳೂರಿಗೆ 160 ಕಿ.ಮೀ.ಉಪನಗರ ರೈಲ್ವೆ ಸಂಪರ್ಕ ಯೋಜನೆ ಸ್ವಾಗತಾರ್ಹ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

Comments are closed.