ಬೆಂಗಳೂರು: ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆಗೆ ಪ್ರಕಾಶ್ ರೈ ಮತ್ತು ದೊರೆಸ್ವಾಮಿಯವರು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ನಟ ಜಗ್ಗೇಶ್ ಪ್ರಶ್ನಿಸಿದ್ದಾರೆ.
ವಿಜಯಕರ್ನಾಟಕ ವೆಬ್ಸೈಟ್ನಲ್ಲಿ ಸಂತೋಷ್ ಕೊಲೆಯ ವರದಿ ಪ್ರಕಟವಾಗಿರುವುದನ್ನು ಪ್ರಸ್ತಾಪಿಸುತ್ತ’ ಮಿತ್ರ ಪ್ರಕಾಶ್ ರೈ ಹಾಗೂ ಪಿತೃಸಮಾನರಾದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿಯವರೇ, ಕೊಲೆಯಾದ ಈ ಕಂದಮ್ಮನ ಬಗ್ಗೆ ಮಾತಾಡಲು ಯಾಕೆ ನಿಮ್ಮ ತುಟಿ ಚಲನೆಯಿಲ್ಲಾ !ಯಾಕೆ ನಿಮ್ಮನಾಲಿಗೆ ನುಡಿಯಲಿಲ್ಲಾ.! ಕಾಂಗ್ರೆಸ್ನ ಪಾಪದ ಋಣ ತಡೆಹಿಡಿಯಿತೇ..! ಗಮನಿಸುತ್ತಿದ್ದಾರೆ ಕರುನಾಡ ಜನ .ಪಾರದರ್ಶಕತೆ ನಡೆ ಇರಲಿ! ಇಲ್ಲದಿದ್ದರೆ ನಗೆಪಾಟಲು ಶ್ರಮದ ನಿಮ್ಮ ಬದುಕು!’ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್ನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಈ ಕೊಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಅವತ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Comments are closed.