ಕರಾವಳಿ

ಮಕ್ಕಳಿಗೆ ಹಣ್ಣು ನೀಡುವ ಮುನ್ನ ಎರಡು ಬಾರಿ ಯೋಚಿಸಿ

Pinterest LinkedIn Tumblr

ನಿಮಗೆ ನಿಮ್ಮ ಮಕ್ಕಳು ಹಣ್ಣು-ಹಂಪಲು ಎತ್ತೇಚ್ಛವಾಗಿ ಸೇವಿಸಿ, ಆರೋಗ್ಯಕರವಾಗಿ ಬೆಳೆಯಲಿ ಎಂಬ ಬಯಕೆ. ಈ ಕಾರಣದಿಂದಲೇ ಮಗುವು ಒಮ್ಮೆ ಘನ ಆಹಾರ ಸೇವಿಸಲು ಶುರು ಮಾಡಿದೊಡನೆ, ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ಪೋಷಕಾಂಶಗಳನ್ನ ಸುಲಭವಾಗಿ ಒದಗಿಸುವ ದಾರಿಯನ್ನಾಗಿ ಹಣ್ಣು ನೀಡುವುದನ್ನ ಕಂಡುಕೊಳ್ಳುತ್ತಾರೆ. ಆದರೆ, ಇಲ್ಲಿ ಒಂದು ಅಮ್ಮನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ನೀವು ನಿಮ್ಮ ಮಗುವಿಗೆ ಇನ್ನು ಮುಂದೆ ಹಣ್ಣುಗಳನ್ನ ನೀಡುವ ಮುನ್ನ ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ.

ಅಂದಹಾಗೆ ಈ ವೈರಲ್ ಫೋಟೋವನ್ನು ತನ್ನ ಖಾತೆಯಿಂದ ಹಂಚಿಕೊಂಡಿರುವ ಅಮ್ಮನ ಹೆಸರು ಏಂಜೆಲಾ ಹೆಂಡೆರ್ಸನ್. ಈಕೆ ಮೂಲತಃ ಆಸ್ಟ್ರೇಲಿಯಾದವಳು. ಈ ಫೋಟೋಗೆ ಈಕೆ ನೀಡಿದ ಶೀರ್ಷಿಕೆಯು ಇನ್ನಷ್ಟು ಗಾಬರಿ ತರಿಸುವಂತದ್ದು ಆಗಿತ್ತು.

ಆಕೆ ತನ್ನ ಫೋಟೋ ಮೇಲೆ “ಎಚ್ಚರ ಪೋಷಕರೇ! ಈ X-ರೇ ಯಾವುದರದ್ದು ಎಂಬುದು ನಿಮಗೆ ಗೊತ್ತೇ? ದ್ರಾಕ್ಷಿ ಹಣ್ಣಿನದ್ದು!…. ನನ್ನ ಮುದ್ದು ಮಗು ಜನರಲ್ ಅನಸ್ತೇಶಿಯಾ ಸಹಾಯದಿಂದ ಸರ್ಜರಿಗೆ ಒಳಪಡಬೇಕಾಯಿತು, ಇವನ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ಈತನ ಉಸಿರಾಟದ ನಾಳವು ತೆರೆದಿಕೊಂಡಿದ್ದು, ದ್ರಾಕ್ಷಿಯು ಅದಕ್ಕೆ ಅಡ್ಡಿ ಮಾಡಿಲ್ಲ. ಇಲ್ಲವೆಂದರೆ ಪರಿಣಾಮವೇ ಬೇರೆಯಾಗಿರುತ್ತಿತ್ತು!” ಎಂದು ಬರೆದುಕೊಂಡಿದ್ದಾಳೆ.

ಹೀಗಾಗಿ ನೀವು ಕೂಡ ಎಚ್ಚರದಿಂದ ಇರಬೇಕು. ಅದು ದ್ರಾಕ್ಷಿ ಆಗಲಿ, ಟೊಮೇಟೊ ಆಗಲಿ ಅಥವಾ ಮತ್ತೊಂದೇ ಆಗಲಿ, ಅದನ್ನು ಕತ್ತರಿಸಿ ಮಗುವಿಗೆ ನೀಡಿ. ಇನ್ನೊಬ್ಬರು ನುರಿತ ತಜ್ಞರ ಪ್ರಕಾರ, ದ್ರಾಕ್ಷಿಗಳು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕೆ ಕುಖ್ಯಾತಿ ಹೊಂದಿವೆ. ಆದರೆ, ವೃತ್ತಾಕಾರದಲ್ಲಿರುವ ಮತ್ತು ಮೃದುವಾಗಿರುವ ಯಾವುದೇ ವಸ್ತು ಆಗಿದ್ದರೂ, ಅದು ಮಾರಕವಾಗಿ ಸಿಲುಕಿ ಹಾಕಿಕೊಳ್ಳಬಹುದು.

Comments are closed.