ಮುಂಬೈ: ಉದಯಪುರದ 14 ವರ್ಷ ವಯಸ್ಸಿನ ಈಜುಪಟು ಗೌರಿ ಸಿಂಘ್ವಿ 48 ಕಿ.ಮೀ. ದೂರ ಈಜುವ ಸಾಹಸಕ್ಕೆ ಮುಂದಾಗಿದ್ದಾಳೆ.
ರಾಜಸ್ಥಾನದ ಪೋರಿ ಗೌರಿ ಸಿಂಘ್ವಿ ಮಂಗಳವಾರ ಬೆಳಿಗ್ಗೆ ಈಜಲು ಆರಂಭಿಸಿದ್ದು, ಮಹಾರಾಷ್ಟ್ರದ ದಕ್ಷಿಣ ತುದಿಯಲ್ಲಿ ಮುಂಬೈಯ ಪಶ್ಚಿಮ ಕರಾವಳಿಯ ಖಾರ್ದಂಡದಿಂದ ಗೇಟ್ ವೇ ಆಫ್ ಇಂಡಿಯಾಕ್ಕೆ ವರೆಗೆ ಈಜುತ್ತಿದ್ದಾಳೆ ಎಂದು ವರಿಯಾಗಿದೆ.
ಗೌರಿ 2017ರಲ್ಲಿ ಸಮುದ್ರ ಮಾರ್ಗದಲ್ಲಿ 36 ಕಿ.ಮೀ. ಈಜಿದ್ದಳು. ಇಂಗ್ಲೀಷ್ ಕಡಲ್ಗಾಲುವೆ ಮತ್ತು ಅರಬ್ಬಿ ಸಮುದ್ರಗಳಲ್ಲಿ ಈಜಿ ಗುರಿ ಸೇರಬೇಕು ಎಂದು ಗೌರಿ ಕನಸು ಹೊಂದಿದ್ದಾಳೆ.
Comments are closed.