ಕರಾವಳಿ

ನಭೋಮಂಡಲದ ವಿಸ್ಮಯಗಳ ಪ್ರದರ್ಶನ : ಭಾರತದ ಮೊದಲ 3ಡಿ ತಾರಾಲಯ ನಾಳೆ ಲೋಕರ್ಪಣೆ 

Pinterest LinkedIn Tumblr

ಮಂಗಳೂರು, ಫೆಬ್ರವರಿ 28: ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ 3ಡಿ ತಾರಾಲಯ ಗುರುವಾರ ಬೆಳಿಗ್ಗೆ ಲೋಕರ್ಪಣೆಗೊಳ್ಳಲಿದೆ.

ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದಿಂದ ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯ ಭಾರತದ ಪ್ರಥಮ 3ಡಿ ತಾರಾಲಯವಾಗಿದೆ.

ಇದು ನಭೋಮಂಡಲದ ವಿಸ್ಮಯಗಳನ್ನು ಪ್ರದರ್ಶಿಸುವ ಅಪರೂಪದ ತಾರಾಲಯವಾಗಿದ್ದು, ವಿಶಿಷ್ಟ ಸೌಲಭ್ಯಗಳನ್ನು ಹೊಂದಿದೆ. ಮಾತ್ರವಲ್ಲದೇ ಭಾರತದ ಮೊದಲ 3ಡಿ 8ಕೆ ಯುಎಚ್ ಡಿ ಹೈಬ್ರಿಡ್ ತಂತ್ರಜ್ಞಾನದ ತಾರಾಲಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಸ್ವಾಮಿ ವಿವೇಕಾನಂದ ತಾರಾಲಯವು 18 ಮೀಟರ್ ವ್ಯಾಸದಷ್ಟು ದೊಡ್ಡದಿದ್ದು, ಆಧುನಿಕ ತಂತ್ರಜ್ಞಾನದ ನ್ಯಾನೋಸೀಮ್ ಡೂಮ್ ಅನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ- ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈ ತಾರಾಲಯದಲ್ಲಿ ಸುಮಾರು 170 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

3ಡಿ ತಾರಾಲಯ ಹೊಂದಿದ ದೇಶದ ಮೊದಲ ನಗರ ದೇಶದಲ್ಲಿ ಈ ತರಹದ ಸೌಲಭ್ಯಗಳುಳ್ಳ 3ಡಿ ತಾರಾಲಯವನ್ನು ಹೊಂದಿದ ಪ್ರಥಮ ನಗರವಾಗಲಿದೆ ಮಂಗಳೂರು. ಪ್ರಪಂಚದಲ್ಲಿ 20 3ಡಿ ತಂತ್ರಜ್ಞಾನ ಹೊಂದಿರುವ ತಾರಾಲಯಗಳಿದ್ದು, ಯುರೋಪ್ ಖಂಡದಲ್ಲಿ ಮೊದಲನೆಯದಾಗಿ ಹೆವೆನ್ಸ್ ಆಫ್ ಕೊಪರ್ನಿಕಸ್ ರೀತಿಯ 3ಡಿ ತಂತ್ರಜ್ಞಾನ ಹೊಂದಿದ ತಾರಾಲಯವಾಗಿದೆ

ಈ ತಾರಾಲಯವು ನಾಳೆ ಉದ್ಘಾಟನೆಗೊಂಡರು ಸಾರ್ವಜನಿಕರ ವೀಕ್ಷಣೆಗೆ ಮಾರ್ಚ್ 2ರಿಂದ ಲಭ್ಯವಾಗಲಿದೆ. ಆರಂಭದಲ್ಲಿ ತಲಾ 25 ನಿಮಿಷಗಳ ನಾಲ್ಕರಿಂದ ಆರು ಪ್ರದರ್ಶನಗಳನ್ನು ಪ್ರತಿ ದಿನ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ನಾಲ್ಕು ತಾರಾ ಲೋಕಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರದರ್ಶನ ನಡೆಯಲಿದೆ.

ನಾಲ್ಕೈದು ತಿಂಗಳ ಅವಧಿಯಲ್ಲಿ ಪ್ರದರ್ಶನಗಳ ವಿಷಯಗಳಲ್ಲಿ ಬದಲಾವಣೆಯೊಂದಿಗೆ ಹೊಸ ವಿಷಯಗಳ ಪ್ರದರ್ಶನಗಳು ಸೇರ್ಪಡೆಗೊಳ್ಳಲಿವೆ. ಪಿಲಿಕುಳದಲ್ಲಿರುವ ಈ ತಾರಾಲಯಕ್ಕೆ ಆನ್ ಲೈನ್ ನಲ್ಲೂ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಬುಕ್ ಮೈ ಶೋ ಮೂಲಕ ಆನ್‌ಲೈನ್‌ನಲ್ಲಿ ಇದರ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಮಕ್ಕಳಿಗೆ ಒಂದು ಪ್ರದರ್ಶನಕ್ಕೆ 25 ರುಪಾಯಿ ಮಕ್ಕಳಿಗೆ ಒಂದು ಪ್ರದರ್ಶನ ವೀಕ್ಷಿಸಲು 25 ರುಪಾಯಿ ಹಾಗೂ ಸಾರ್ವಜನಿಕರಿಗೆ ಒಂದು ಪ್ರದರ್ಶನ ವೀಕ್ಷಿಸಲು 60 ರುಪಾಯಿ ನಿಗದಿಪಡಿಸಲಾಗಿದೆ. ಅಲ್ಲದೆ, ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಸಂದರ್ಶಕರಿಗೆ ವಿಶೇಷ ಪ್ಯಾಕೇಜ್‌ ಅನ್ನು ಮಾರ್ಚ್ 1 ರಿಂದ ಒದಗಿಸಲಾಗುವುದು. 100 ರುಪಾಯಿ ಟಿಕೆಟ್ ಪಡೆದುಕೊಂಡರೆ ಪಿಲಿಕುಳದ ಎಲ್ಲ ವಿಭಾಗಗಳಿಗೆ ಪ್ರವೇಶ ಪಡೆಯಬಹುದು.

ಪಿಲಿಕುಳ ಪ್ರವೇಶದ್ವಾರದ ಬಲ ಬದಿಯಲ್ಲಿರುವ ಕೌಂಟರ್‌ನಲ್ಲಿ ಈ ಟಿಕೆಟ್ ಗಳನ್ನು ವಿತರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

Comments are closed.