ಉಡುಪಿ: ರೌಡಿ ಶೀಟರ್ ಓರ್ವನ ಬರ್ಬರ ಕೊಲೆ ಉಡುಪಿ ಜಿಲ್ಲೆ ಇನ್ನ ಗ್ರಾಮದ ಕಾಂಜರಕಟ್ಟೆ ಎಂಬಲ್ಲಿ ಕೊಲೆ ನಡೆದಿದೆ.
ಕಾಂಜರಕಟ್ಟೆ ನಿವಾಸಿ ರೌಡಿ ಶೀಟರ್ ನವೀನ್ ಡಿಸೋಜಾ ಎನ್ನುವವನನ್ನ ಸ್ವಿಪ್ಟ್ ಕಾರಿನಲ್ಲಿ ಬಂದ ತಂಡವೊಂದು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕಾಂಜರಕಟ್ಟೆಯ ಗ್ಲೋರಿಯ ಬಾರೊಂದರ ಸಮೀಪ ,ರಾತ್ರಿ ಸುಮಾರು ೧೦ ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದು, ಇರಿತಕ್ಕೊಳಗಾದ ನವೀನ್ ಡಿಜೋಜ ಸ್ಥಳದಲ್ಲೇ ಸಾವನ್ನಾಪ್ಪಿದ್ದಾನೆ.
ವಿಷಯ ತಿಳಿದ ಪಡುಬಿದ್ರಿ ಠಾಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನವೀನ್ ಡಿಜೋಜ ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಹಳೆ ವೈಷಮ್ಯವೇ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ.
Comments are closed.