ಮಂಗಳೂರು: ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದಷ್ಟು ಕಾಯಿಲೆಗಳು ಕಡಿಮೆಯಾಗುವುದು. ಶೀತ, ನೆಗಡಿ ಮುಂತಾದ ರೋಗಗಳು ಆಗಾಗ ಕಾಣಿಸಿಕೊಂಡರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಅರ್ಥ. ಆದರೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಕೂಡ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಆ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ.
ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
1. ಸಿಟ್ರಸ್ ಇರುವ ಹಣ್ಣುಗಳು: ಕೆಮ್ಮು ಮತ್ತು ನೆಗಡಿ ಇರುವಾಗ ಸಿಟ್ರಸ್ ಇರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳ ಸೇವನೆ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುವುದು.
2. ಅಣಬೆ: ಪ್ರತಿದಿನ ಅಣಬೆ ಸೂಪ್ ಮಾಡಿ ಕುಡಿದರೆ ದೇಹವು ಕಾಯಿಲೆಯಿಂದ ಮುಕ್ತವಾಗುವುದು. ಇದರಲ್ಲಿರುವ ಪೋಷಕಾಂಶಗಳು ಸೋಂಕಾಣು ಮತ್ತು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುವ ಅತ್ಯುತ್ತಮವಾದ ಪದಾರ್ಥವಾಗಿದೆ. ಏಕೆಂದರೆ ಇದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ. ಶೀತ ಮತ್ತು ಅಲರ್ಜಿಯಿಂದ ಮುಕ್ತಿಯನ್ನು ನೀಡುತ್ತದೆ. ಗಾಯಗಳು ಉಂಟಾದರೆ ಬೇಗನೆ ಗುಣಪಡಿಸಲು ಸಹಕಾರಿಯಾಗಿದೆ.
4. ಮೊಸರು: ಮೊಸರಿನಲ್ಲಿ ಆರೋಗ್ಯಕರ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ ಇರುವುದರಿಂದ ಹೊಟ್ಟೆಯ ಆರೋಗ್ಯವನ್ನು ಹೆಚ್ಚಿಸಿ ಸೋಂಕು ತಗುಲದಂತೆ ಕಾಪಾಡುತ್ತದೆ.
5. ಮೃದ್ವಂಗಿಗಳು: ಇತರ ಸಮುದ್ರ ಆಹಾರಗಳಿಗಿಂತ ಮೃದ್ವಂಗಿಗಳಲ್ಲಿ ಸೆಲಿನಿಯಂ ಅಧಿಕವಿರುವುದರಿಂದ ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.
6. ಬಾರ್ಲಿ ಮತ್ತು ಓಟ್ಸ್: ನಾರಿನಂಶವಿರುವ ಆಹಾರ ಸೇವನೆ ಒಳ್ಳೆಯದು. ಅದರಲ್ಲಿ ಬಾರ್ಲಿ ಮತ್ತು ಓಟ್ಸ್ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ ಆದ್ದರಿಂದ ಗಾಯವಾದಾಗ ಇವುಗಳನ್ನು ತಿಂದರೆ ಗಾಯ ಬೇಗನೆ ಗುಣಮುಖವಾಗುವುದು.
7. ಟೀ: ಶೀತವಾದರೆ ಶುಂಠಿ ಟೀ ಕುಡಿಯಿರಿ. ಟೀಯಲ್ಲಿರುವ ಅಮೈನೊ ಆಸಿಡ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Comments are closed.