ಮುಂಬೈ: ಭಾರತೀಯ ಸಿನಿಮಾದ ದಂತಕಥೆ ಮತ್ತು ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಂಡಿರುವ ಶ್ರೀದೇವಿ ಫೆಬ್ರವರಿ 24 ರಂದು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಬಾಲಿವುಡ್ ನ ಬಹುತೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ.
ನಟ ಸಲ್ಮಾನ್ ಖಾನ್ ಮಾತ್ರ ಶ್ರೀದೇವಿ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯಲ್ಲಿ ಸಂತಾಪ ಸೂಚಿಸಿಲ್ಲ. ಕಲಾವಿದರು ಸಂತಾಪ ಸೂಚಿಸುತ್ತಿರುವಾಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಲ್ಮಾನ್ ಯಾಕೆ ಸಂತಾಪ ಸೂಚಿಸಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಸಲ್ಮಾನ್ ಖಾನ್ ಶ್ರೀದೇವಿ ಮತ್ತು ಆಕೆಯ ಪತಿ ಬೋನಿ ಕಪೂರ್ ಜೊತೆ ಉತ್ತಮ ಸ್ನೇಹ ವಿತ್ತು. ಅಷ್ಟೇ ಅಲ್ಲದೇ ತಮ್ಮ ಯಾವುದೇ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಲು ಸಲ್ಮಾನ್ ಇಷ್ಟಪಡುವುದಿಲ್ಲ. ಶ್ರೀದೇವಿ ಕುಟುಂಬಕ್ಕೆ ಆಪ್ತರಾಗಿದ್ದ ಸಲ್ಮಾನ್ ಗೆ ಇಂತಹ ಸೂಕ್ಷ್ಮ ವಿಚಾರವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಇಷ್ಟವಿರಲಿಲ್ಲ. ಆದ್ದರಿಂದ ಈ ಕಾರಣಕ್ಕೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀದೇವಿ ಸಾವಿನ ಬಗ್ಗೆ ಯಾವುದೇ ರೀತಿ ಸಂತಾಪ ಸೂಚಿಸದೆ ಸುಮ್ಮನಿದ್ದರು ಎಂದು ಮಾಧ್ಯಮವೊಂದು ಪ್ರಕಟಿಸಿದೆ.
ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು. ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಬುಧವಾರ ಅಯ್ಯಪ್ಪನ್ ಸಂಪ್ರದಾಯದಂತೆ ಬಾಲಿವುಡ್ ನಟಿ ಶ್ರೀದೇವಿಯ ಅಂತ್ಯಕ್ರಿಯೆ ನೇರವೇರಿದೆ.
Comments are closed.