ಮುಂಬಯಿ: ಮಹೀಂದ್ರ ಟು ವೀಲರ್ಸ್ ಬಿಡುಗಡೆ ಮಾಡಿರುವ ಅತ್ಯಂತ ಜನಪ್ರಿಯ ಬೈಕ್ಗಳಲ್ಲಿ ಮೊಜೊ 300 ಒಂದಾಗಿದೆ. ಇದೀಗ ಸಂಸ್ಥೆಯು ಕಡಿಮೆ ಬೆಲೆಯ ಮೊಜೊ ಯುಟಿ ಬೈಕ್ ಬಿಡುಗೆಡೆಗೂಳಿಸಿದೆ. ಇಲ್ಲಿ ಮೊಜೊ ಯುಟಿ 300 ಎಂದರೆ ‘ಯೂನಿವರ್ಸಲ್ ಟೂರರ್’ ಎಂಬ ಅರ್ಥವನ್ನು ನೀಡುತ್ತದೆ.
ಬೆಲೆ: 1.4 ಲಕ್ಷ ರೂ. (ಎಕ್ಸ್ ಶೋ ರೂಂ ದಿಲ್ಲಿ)
ಸ್ಟ್ಯಾಂಡರ್ಡ್ ಮೊಜೊ ಎಕ್ಸ್ಟ್ರೀಮ್ ಟೂರರ್ ಮಾದರಿಗೆ ಹೋಲಿಸಿದಾಗ ಮೊಜೊ ಯುಟಿ 300 ಮಾದರಿಯು 35,000 ರೂ.ಗಳಷ್ಟು ಕಡಿಮೆ ದುಬಾರಿಯೆನಿಸುತ್ತದೆ.
ನೂತನ ಮಹೀಂದ್ರ ಮೊಜೊ ಯುಟಿ300 ಮಾದರಿಯು ಕಾಸ್ಮೆಟಿಕ್ ಜತೆಗೆ ತಾಂತ್ರಿಕ ಬದಲಾವಣೆಗಳನ್ನು ಪಡೆದಿದೆ. ಅಲ್ಲದೆ ಈ ಪ್ರೀಮಿಯಂ ಬೈಕ್ನ ಒಟ್ಟಾರೆ ಬೆಲೆ ಕಡಿತಗೊಳಿಸಲು ಗಮನ ವಹಿಸಲಾಗಿದೆ.
ಅಂದರೆ ಸಾಂಪ್ರದಾಯಿಕ ಟೆಲಿಸ್ಕಾಪಿಕ್ ಫಾರ್ಕ್ ಬದಲಾಗಿ ಇನ್ವರ್ಟಡ್ ಫಾರ್ಕ್ ಹಾಗೂ ಎಕ್ಸಾಸ್ಟ್ ಮಫ್ಲರ್ಗೆ ಕತ್ತರಿ ಪ್ರಯೋಗ ಮಾಡಲಾಗಿದೆ.
ಡ್ಯುಯಲ್ ಹೆಡ್ಲ್ಯಾಂಪ್ ಜತೆಗೆ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇರಲಿದೆ. ಬೃಹತ್ತಾದ 21 ಲೀಟರ್ ಇಂಧನ ಟ್ಯಾಕ್ ಜೋಡಣೆ ಮಾಡಲಾಗಿದೆ.
ಪ್ರೀಮಿಯಂ ಅಲಾಯ್ ಚಕ್ರಗಳೊಂದಿಗೆ ಮುಂದುಗಡೆ 320 ಎಂಎಂ ಹಾಗೂ 240 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡಲಾಗಿದೆ. ಆದರೆ ಪೈರೆಲ್ಲಿ ಚಕ್ರಗಳ ಬದಲಾಗಿ ಎಂಆರ್ಎಫ್ ಚಕ್ರಗಳನ್ನು ಜೋಡಿಸಲಾಗಿದೆ.
ಹಾಗೆಯೇ ಬಹು ಕ್ರಿಯಾತ್ಮಕ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟಾರ್ನಲ್ಲಿ ಬದಲಾವಣೆ ಕಂಡುಬಂದಿಲ್ಲ. ಹಾಗೆಯೇ ಮಾಹಿತಿಗಾಗಿ ಎಲ್ಸಿಡಿ ಸ್ಕ್ರೀನ್ ಇರಲಿದೆ.
ಡ್ಯುಯಲ್ ಟೋನ್ (ಜೋಡಿ ಬಣ್ಣ) ಬದಲಾಗಿ ಸಿಂಗ್ ಟೋನ್ ಕೆಂಪು ಹಾಗೂ ನೀಲಿ ಬಣ್ಣದ ಆಯ್ಕೆಯಿರಲಿದೆ.
ಎಂಜಿನ್:
300ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್,
23.1PS, 25.2Nm
ಇಲ್ಲಿ ಗಮನಾರ್ಹ ಅಂಶವೆಂದರೆ ಮಹೀಂದ್ರ ಸ್ಟ್ಯಾಂಡರ್ಡ್ ಎಕ್ಸ್ಟಿ ಮಾದರಿಯು ಇದಕ್ಕಿಂತಲೂ 4.1 ಪಿಎಸ್ ಹೆಚ್ಚು ಅಶ್ವಶಕ್ತಿಯನ್ನು ಹಾಗೂ 4.8 ಎನ್ಎಂಗಳಷ್ಟು ಹೆಚ್ಚು ತಿರುಗುಬಲವನ್ನು ನೀಡುತ್ತದೆ.
ಆಫರ್: ಪರಿಚಯತ್ಮಕ ಭಾಗವಾಗಿ ಇದೇ ತಿಂಗಳಲ್ಲಿ ಬುಕ್ಕಿಂಗ್ ಮಾಡಿದ್ದಲ್ಲಿ 10,000 ರೂ.ಗಳ ಪ್ರಯೋಜನ ನೀಡಲಾಗುತ್ತಿದೆ.
Comments are closed.