ಮಂಡ್ಯದಲ್ಲಿ ಗುರುವಾರ ಸಂಧಾನ ರಾಜಕಾರಣ ನಡೆಯಿತು. ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಚ್ಚಿದಾನಂದ ಅವರನ್ನು ಮನವೊಲಿಸುವ ಸಲುವಾಗಿ ಸಂಧಾನಕಾರರಾಗಿ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮಕ್ಕೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರ ಕೊರಳಿಗೆ 3 ಕ್ವಿಂಟಾಲ್ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು. ಇದೇವೇಳೆ ಜೆಸಿಬಿಯಲ್ಲಿ ಕೂತು ಹೂವಿನ ಮಳೆ ಕೂಡ ಸುರಿಸಲಾಯಿತು. ಇದು ಸಚ್ಚಿದಾನಂದ ಅವರ ಬೆಂಬಲಿಗರು ಯಶಸ್ವಿ ಸಂಧಾನ ಕೋರಿ ಮಾಡಿದ ಸನ್ಮಾನವಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
-ಉದಯವಾಣಿ
Comments are closed.