ಉಡುಪಿ: ಕಳೆದೊಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಾರ್ ಗಳನ್ನು ಸ್ಥಳಾಂತರಿಸಿದ ಬೆನ್ನಲ್ಲೇ ಬಾರಿಗೆ ಬರುವ ಗಿರಾಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ ಬಾರ್ ಹಾಗೂ ವೈನ್ ಶಾಪ್ ಮಾಲೀಕರು. ಆದರೇ ಈ ಸಮಸ್ಯೆಯನ್ನು ಬಗೆಹರಿಸಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಉಡುಪಿಯ ಅಜೆಕಾರಿನ ರಚನಾ ಬಾರ್ ಮಾಲೀಕ ನವೀನ್ ಹೊಸ ಐಡಿಯಾ ಮಾಡಿದ್ದಾರೆ. ಅದೇ ಇವರಿಗೆ ಈಗ ತಲೆನೋವಾಗಿ ಪರಿಣಮಿಸಿದೆ.
ರಚನಾ ಬಾರ್ ಮಾಲೀಕ ನವೀನ್ ಅವರು, ಗ್ರಾಹಕರ ಸೇವೆಗೆ ಉಚಿತ ಆಟೋ ವ್ಯವಸ್ಥೆಯ ಬೋರ್ಡೊಂದನ್ನು ರೆಡಿ ಮಾಡಿದ್ದರು. ಈ ಬೋರ್ಡನ್ನು ಬಾರ್ ಪಕ್ಕ ಕಟ್ಟಿದ್ದರು. ಆದ್ರೆ ಬಾರ್ ಮಾಲೀಕ ಇಲ್ಲದ ಸಂದರ್ಭದಲ್ಲಿ ಕೆಲ ಹುಡುಗರು ಆ ಬ್ಯಾನರನ್ನು ತೆಗೆದು ಆಟೋ ರಿಕ್ಷಾಗೆ ಕಟ್ಟಿದ್ದಾರೆ ಅಂತ ಮಾಲೀಕ ಹೇಳುತ್ತಿದ್ದಾರೆ.
ಅಬಕಾರಿ ಕಾಯ್ದೆಯ ಪ್ರಕಾರ ಮದ್ಯಸೇವನೆಗೆ ಪ್ರಚಾರ ಮಾಡುವುದು ಅಪರಾಧ. ಹೀಗಾಗಿ ಅಬಕಾರಿ ಅಧೀಕ್ಷಕರ ಸೂಚನೆ ಮೇರೆಗೆ ಆಟೋದ ಬ್ಯಾನರ್ ತೆಗೆಸಿರುವ ಕಾರ್ಕಳ ಅಬಕಾರಿ ಇನ್ಸ್ಪೆಕ್ಟರ್ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆ ಫೋಟೋಗಳನು ತೆರವು ಮಾಡಲಾಗಿದೆ ಎನ್ನಲಾಗಿದೆ.
Comments are closed.