ಕರ್ನಾಟಕ

ಕೆಲವರು ಹೇಳುವ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಾವು ಮಾಡಿದ್ದೇವೆ!

Pinterest LinkedIn Tumblr


ಹೊಸದಿಲ್ಲಿ: ‘ನಾವು ನಡೆದಂತೆ ನುಡಿದಿದ್ದು ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕಾಂಗ್ರೆಸ್‌ ಪೂರ್ಣಾಧಿವೇಶನದಲ್ಲಿ ಹೇಳಿದ್ದಾರೆ.

‘ಕೆಲವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಬಗ್ಗೆ ಹೇಳಿದರು. ನಾವು ಮಾಡಿತೋರಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷ ಟಾಂಗ್‌ ನೀಡಿದರು.

‘ಅನ್ನಭಾಗ್ಯ ಸೇರಿದಂತೆ ಸರ್ಕಾರದ ಜನಪ್ರಿಯ ಯೋಜನಗಳಿಂದ ಜನರಿಗೆ ಬಹಳಷ್ಟು ಅನುಕೂಲ ಆಗಿದೆ’ ಎಂದರು.

‘ಬಸವಣ್ಣನ ಕಲ್ಯಾಣ ಕರ್ನಾಟಕವೇ ನಮ್ಮ ಗುರಿ , ಅದರತ್ತ ನಾವು ಹೆಜ್ಜೆ ಇಟ್ಟಿದ್ದೇವೆ.ಕಾಯಕವೇ ಕೈಲಾಸ ನಮ್ಮ ಧ್ಯೇಯವಾಕ್ಯ’ ಎಂದರು.

‘2019 ರಲ್ಲಿ ರಾಹುಲ್‌ ಗಾಂಧಿ ಅವರು ಪ್ರಧಾನಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದರು.

-ಉದಯವಾಣಿ

Comments are closed.