ಕರ್ನಾಟಕ

ಬಸ್‌‌ ನಲ್ಲಿ ಮುದುಕನ ಕಿತಾಪತಿ : ಪ್ರಕರಣ ದಾಖಲು

Pinterest LinkedIn Tumblr


ಬೆಂಗಳೂರು: 65 ವರ್ಷದ ಮುದುಕನೊಬ್ಬ ತನ್ನ ಮಗಳ ವಯಸ್ಸಿನ ಯುವತಿಯ ಜೊತೆ ಅಸಭ್ಯವಾಗಿ ಬಿಎಂಟಿಸಿ ಬಸ್ ನಲ್ಲಿ ವರ್ತಿಸಿರುವ ಆರೋಪ ಕೇಳಿಬಂದಿದೆ.

ಮಾರ್ಚ್ 13 ರಂದು ರಾತ್ರಿ 8ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಯುವತಿಯ ಪಕ್ಕದಲ್ಲಿ ನಿಂತ ಮುದುಕನೊಬ್ಬ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ತಾನು ಕುಳಿತಿದ್ದ ಸೀಟಿನ ವೃದ್ಧರೊಬ್ಬರು ಬಂದರು ಎಂದು ಸೌಜನ್ಯದಿಂದ ಯುವತಿ ಸೀಟು ಬಿಡುತ್ತೇನೆ ಕುಳಿತುಕೊಳ್ಳಿ ಎಂದಿದ್ದಾರೆ. ಸೀಟು ಬೇಡ ಎಂದ ಮುದುಕ ಕೆಲವೇ ಸಮಯದ ನಂತರ ಪ್ಯಾಂಟ್ ಜಿಪ್ ತೆಗೆದು ಯುವತಿ ಸಮೀಪ ಹೋಗಿ ಬಸ್ ನಲ್ಲೇ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಏನ್ ಮಾಡ್ತಿದ್ದೀಯಾ ಎಂದು ಯುವತಿ ಕಾಮುಕ ಮುದುಕನನ್ನು ಪ್ರಶ್ನಿಸಿದ್ದಾಳೆ. ಆಗ ಮುದುಕ ಯುವತಿಯ ಜೊತೆಗೇ ಜಗಳ ಮಾಡಿ ಬಸ್ ನಲ್ಲಿ ರಂಪಾಟ ಮಾಡಿದ್ದಾನೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಕಾಮುಕ ಛೀಮಾರಿ ಹಾಕಿ ಬಸ್ ನಿಂದಕೆಳಗೆ ಇಳಿಸಿದ್ದಾರೆ. ಘಟನೆಯಿಂದ ಬೇಸರಕ್ಕೊಳಗಾದ ಯುವತಿ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಅಪರಿಚಿತ ಕಾಮುಕ ಮುದುಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.