ಕರ್ನಾಟಕ

19ರಂದು ಆನ್ಲೈನಿನಲ್ಲಿ ಫಸ್ಟ್ ಪಿಯು ಫಲಿತಾಂಶ ಲಭ್ಯ

Pinterest LinkedIn Tumblr


ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯು ಪರೀಕ್ಷಾ ಫಲಿತಾಂಶ ಇದೇ ತಿಂಗಳ ಮಾ.19ರಂದು ಆನ್ಲೈನಿನಲ್ಲಿ ಲಭ್ಯವಾಗ ಲಿದೆ. ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗಲಿದ್ದು, ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸುವ ಕುರಿತು ಪರಿಶೀಲಿ ಸಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ (ದ.ಕ.) ಉಪ ನಿರ್ದೇಶಕ ಕೆ.ಆರ್.ತಿಮ್ಮಯ್ಯ ತಿಳಿಸಿದರು.

19ರಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಫಲಿತಾಂಶವನ್ನು ಆನ್ಲೈನ್ ಮೂಲಕ ಪರಿಶೀಲಿಸಬಹುದು. ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ವೆಬ್ಸೈಟ್: http://result.dkpucpa.com ಬಳಸಬೇಕು. ನಿರ್ದಿಷ್ಟ ಸ್ಥಳಗಳಲ್ಲಿ ಕಲಿಯುತ್ತಿರುವ ಕಾಲೇಜಿನ ಹೆಸರು, ರೋಲ್ ನಂಬರ್ ಹಾಗೂ ಹುಟ್ಟಿದ ದಿನಾಂಕ ನಮೂದಿನಸಬೇಕು. ಬಳಿಕ ಫಲಿತಾಂಶ ಬಟನ್ ಪ್ರೆಸ್ ಮಾಡಬೇಕು. ಮುಂದಿನ ವರ್ಷದಿಂದ ಫಲಿತಾಂಶ ಸರಳಗೊಳಿಸುವ ಉದ್ದೇಶದಿಂದ ಪಿಯು ವಿದ್ಯಾರ್ಥಿಗಳಿಗೆ ವಿಶಿಷ್ಟ ನೋಂದಣಿ ಸಂಖ್ಯೆ ಒದಗಿಸಲು ಉದ್ದೇಶಿಸಲಾಗಿದೆ.

ಫಲಿತಾಂಶದಲ್ಲಿ ಪಾರದರ್ಶಕತೆ, ಸ್ಪಷ್ಟತೆ ಮತ್ತು ಏಕರೂಪತೆ ತರುವುದು. ವಿದ್ಯಾರ್ಥಿಗಳ ಮಾಹಿತಿಯನ್ನು ಸಮಗ್ರವಾಗಿ ಕ್ರೋಡೀಕರಿಸಿ ಗೌಪ್ಯತೆ ಕಾಪಾಡುವುದು. ಸ್ವಯಂಚಾಲಿತ ಪ್ರವೇಶ ಪತ್ರ, ಅಂಕಪಟ್ಟಿ ಮತ್ತು ಫಲಿತಾಂಶ ಅನುಮೋದನೆಗೆ ಬೇಕಾದ ಎಲ್ಲ ಅನುಬಂಧಗಳು ಸಹಿತ ಫಲಿತಾಂಶ ಪಟ್ಟಿ ಮುದ್ರಿಸಲು ಅವಕಾಶ. ಎ.16 ರಿಂದ ಪೂರಕ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ತೇರ್ಗಡೆಯಾದ ವಿಷಯ/ಭಾಷೆಗಳಲ್ಲಿ ಮರು ಪರೀಕ್ಷೆ ಬರೆಯಲು ಪಾವತಿಸಬೇಕಾದ ಶುಲ್ಕ ಮತ್ತು ಪಡೆದ ಅಂಕಗಳ ಮಾಹಿತಿ ಇರುವ ಪೂರಕ ಅರ್ಜಿಯೊಂದಿಗೆ ಶುಲ್ಕ ಪಾವತಿಸಲು ಮಾ.31 ಕೊನೆಯ ದಿನವಾಗಿರುತ್ತದೆ.

Comments are closed.