ಈಗಿನ ಗಡಿಬಿಡಿ ಹಾಗೂ ಫಾಸ್ಟ್ ಜೀವನದಲ್ಲಿ ದಿನ ಕಳೆಯುವುದೇ ಬಹುತೇಕರಿಗೆ ಗೊತ್ತಾಗುವುದಿಲ್ಲ. ಒತ್ತಡದಲ್ಲಿಯೇ ತಮ್ಮ ದಿನವನ್ನು ಕಳೆಯುತ್ತಾರೆ. ಅಲಾರಂ ಶಬ್ದ ಬಡಿದುಕೊಂಡ ನಂತರ ಬೇಗನೆ ಎದ್ದೇಳುವುದು ಅವಸರ ಅವಸರದಲ್ಲಿ ಕಚೇರಿಗೆ ಇಲ್ಲವೆ ಕೆಲಸಕ್ಕೆ ತಯಾರುಗುವುದು. ಸೋಮಾರಿತನ ಮೈಗೂಡಿಸಿಕೊಂಡವರು ತಡವಾಗಿ ಎದ್ದು ಗಡಿಬಿಡಿಯಲ್ಲಿ ತಯಾರಾಗಿ ದಿನವಿಡಿ ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ. ಕೆಳಗಿನ 9 ಸಲಹೆಗಳಿಂದ ನಿತ್ಯ ದಿನವಿಡಿ ಫ್ರೆಶ್ ಆಗಿರಬಹುದು.
1) ರಾತ್ರಿಯೇ ದಿನಚರಿ ಅಳವಡಿಸಿಕೊಳ್ಳಿ: ಮಲಗುವ ಮುನ್ನವೆ ಬೆಳಿಗ್ಗೆ ಏನು ಮಾಡಬೇಕೆಂದು ದಿನಚರಿ ರೂಢಿಸಿಕೊಳ್ಳಿ ಸಾಧ್ಯವಾದಷ್ಟು ಬೇಗೆನೆ ಊಟ ಸೇವಿಸಿ. ಬೇರೆ ಬೇರೆ ಕೆಲಸಗಳಿದ್ದರೆ ಅದನ್ನು ಪೂರ್ಣಗೊಳಿಸಿ ನಿದ್ರೆಗೆ ಜಾರಿ. ಈ ರೀತಿ ಮಾಡುವುದರಿಂದ ಬೆಳಗಿನ ನಿಮ್ಮ ದಿನಚರಿಗಳು ಸುಗಮವಾಗಿರುತ್ತವೆ.
2) ಮುಂಚಿತವಾಗಿ ಸಣ್ಣ ಸಿದ್ದತೆಗಳನ್ನು ಮಾಡಿಕೊಳ್ಳಿ: ನಾಳೆ ಯಾವ ಕೆಲಸಗಳನ್ನು ಮಾಡಬೇಕೆಂದು ರಾತ್ರಿಯೇ ಸಿದ್ದತೆ ಮಾಡಿಕೊಳ್ಳಿ. ಕಾಲಹರಣ ಮಾಡಬೇಡಿ ಕಾಲಹರಣ ಮಾಡಿದರೆ ಬೆಳಗಿನ ಕೆಲಸಗಳು ಗಡಿಬಿಡಿಯಾಗುತ್ತವೆ. ಅವಸರವಾಗಿ ಎಲ್ಲ ಕೆಲಸಗಳು ಆಗುವುದರಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ.
3) ಮಧ್ಯಾಹ್ನದ ಊಟದ ಪ್ಲ್ಯಾನ್ ಕೂಡ ಯೋಜನೆ ಮಾಡಿಕೊಳ್ಳಿ: ರಾತ್ರಿಯೇ ನಾಳೆ ಏನು ಅಡುಗೆ ಮಾಡಬೇಕು, ಕಚೇರಿಗೆ ಏನು ಊಟ ತೆಗೆದುಕೊಂಡು ಹೋಗಬೇಕು, ಭೋಜನಕ್ಕೆ ಹೊರಗಡೆ ಹೋಗಬೇಕೆ, ಸ್ನೇಹಿತರು ನಿಮ್ಮನ್ನು ಆಹ್ವಾನಿಸಿದ್ದಾರೆಯೇ ಮುಂಚೆಯೇ ಯೋಜಿಸಿ ಮುನ್ನಡೆಯಿರಿ.
4) ಹಳೆಯ ಶೈಲಿಯ ಅಲರಾಂ ಬಳಸಿ: ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಏಳಲು ಮೊಬೈಲ್ ಅಲಾರಾಂ ಬಳಸುತ್ತಾರೆ. ಆದರೆ ಕೆಲವರು ತೊಂದರೆಯಾಗಬಾರದೆಂದು ಮೊಬೈಲ್’ಅನ್ನು ಸೈಲೆಂಟ್ ಅಥವಾ ವೈಬ್ರೈಟ್ ಮೂಡಿನಲ್ಲಿ ಇಟ್ಟಿರುತ್ತಾರೆ. ಬೆಳಿಗ್ಗೆ ಬೇಗ ಏಳದಿದ್ದರೆ ದಿನವಿಡಿ ನಿಮ್ಮನ್ನು ಒತ್ತಡಕ್ಕೀಡು ಮಾಡುವ ಸಾಧ್ಯತೆಯಿದೆ.
5) ಬೆಳಗಿನ ಸಮಯದಲ್ಲಿ ತಂಪಾದ ರಿಂಗ್ ಟೋನ್ ಇಟ್ಟುಕೊಳ್ಳಿ: ಒಂದು ವೇಳೆ ಮೊಬೈಲ್ ಫೋನಿನಲ್ಲಿ ಅಲರಾಂ ಇಟ್ಟುಕೊಂಡಿದ್ದರೆ ಹೆಚ್ಚು ಶಬ್ದ, ಕರ್ಕಶವಿರುವ ಟ್ಯೂನ್’ಗಳನ್ನು ಸೆಟ್ ಮಾಡಿಕೊಳ್ಳುವುದು ಬಿಟ್ಟು ತಂಪಾದ, ಹಿತವಾದ ಟೋನ್’ಗಳನ್ನು ಅಳವಡಿಸಿಕೊಳ್ಳಿ.
6) ಸ್ನೂಜ್ ಬಟನ್’ನನ್ನು ಆದಷ್ಟು ಕಡಿಮೆ ಮಾಡಿ: ರಿಂಗ್ ಟೋನ್’ನಲ್ಲಿ ಸ್ನೂಜ್ ಬಟನ್’ಗಳನ್ನು ಆದಷ್ಟು ಕಡಿಮೆ ಮಾಡಿ ಒಂದು ಬಾರಿ ಅಲಾರಂ ಆದರೆ ಆಗಲೆ ಎದ್ದರೆ ಉತ್ತಮ.
7) ಎದ್ದ ನಂತರ ಸೋಮಾರಿತನ ಬೇಡ : ಬಹುತೇಕರು ಬೆಳೆಗ್ಗೆ ಎದ್ದ ನಂತರ ಸೋಮಾರಿತನ ಕೆಲ ಹೊತ್ತು ಏಳದೆ ಸೋಮಾರಿತನ ಬೆಳಸಿಕೊಳ್ಳುವುದು ಸಹಜ. ರೀತಿಯ ಸೋಮಾರಿತನವನ್ನು ಕಡಿಮೆ ಮಾಡಿ ದಿನಚರಿಯನ್ನು ಆರಂಭಿಸಿ.
8) ಎದ್ದ ನಂತರ ಕೆಲ ಹೊತ್ತು ವ್ಯಾಯಾಮ ಅಗತ್ಯ: ವ್ಯದ್ಯರ ಸಲಹೆಯಂತೆ ಬೆಳಿಗ್ಗೆ ಎದ್ದ ಕೂಡಲೆ ಕೆಲ ಹೊತ್ತು ನಿಮ್ಮ ಮೈಕೈಗೆ ವ್ಯಾಯಾಮ ಅಗತ್ಯ. ಇದರಿಂದ ನಿಮ್ಮ ದೇಹ ನಿತ್ಯದ ಚಟುವಟಿಕೆಗಳಿಗೆ ಅರಾಮದಾಯಕ ನೀಡುತ್ತದೆ.
9) ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸಿ : ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸಿದರೆ ನಿಮ್ಮ ಕೆಲಸಗಳು ಸುಲಲಿತವಾಗಿ ಆಗುತ್ತದೆ.
Comments are closed.