ವಿಶ್ವದಲ್ಲಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮಗಳಲ್ಲಿ ವಾಟ್ಸ’ಪ್ ಮೊದಲ ಸ್ಥಾನವನ್ನು ಅಲಂಕರಿಸಿದೆ. ಸಣ್ಣ ಹುಡುಗರಿಂದ ವೃದ್ಧರವರೆಗೂ ಪ್ರತಿಯೊಬ್ಬರೂ ಇದರ ಬಳಕೆದಾರರೆ. ಗ್ರೂಪ್’ಗಳ ಮೂಲಕ ಸುದ್ದಿ, ಮಾಹಿತಿಗಳನ್ನು ಬೇಗನೆ ಹಂಚಿಕೊಳ್ಳುತ್ತಿದ್ದಾರೆ. ಈ ವಾಟ್ಸ’ಪ್’ನನಲ್ಲಿ ಬಹುತೇಕರು ಬಳಸದಿರುವ 10 ಅದ್ಭುತ ಆಪ್ಷನ್’ಗಳಿವೆ. ಇವುಗಳಿಂದ ಇನ್ನಷ್ಟು ಅನುಕೂಲ ಪಡೆಯಬಹುದು.
1) ವಾಟ್ಸ’ಪ್ ಮೂಲಕ ಶುಲ್ಕಗಳನ್ನು ಪಾವತಿಸಬಹುದು: ವಾಟ್ಸ’ಪ್ ಮೂಲಕ ನೀವು ವಿವಿಧ ಸೇವೆಗಳನ್ನು ಪಾವತಿಸಬಹುದು. ಯುಪಿಐ ಪಾವತಿ ಆಯ್ಕೆ ಮೂಲಕ ಹಣವನ್ನು ಪಾವತಿಸಬಹುದು ಹಾಗೂ ಸ್ವೀಕರಿಸಬಹುದು. ಇದಕ್ಕಾಗಿ ಕಂಪನಿಯು ಐಸಿಐಸಿ’ಐ, ಹೆಚ್’ಡಿಎಫ್’ಸಿ, ಆಕ್ಸಿಸ್, ಎಸ್’ಬಿಐ ಎಸ್ ಬ್ಯಾಂಕ್’ಗಳಲ್ಲದೆ ಹಲವು ಬ್ಯಾಂಕ್’ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.
2) ಡೆಲಿಟ್ ಫಾರ್ ಎವರಿ’ಒನ್: ನೀವು ಗ್ರೂಪಿ’ನಲ್ಲಿ ಹಾಗೂ ವೈಯುಕ್ತಿಕವಾಗಿ ಕಳಿಸಿರುವ ಸಂದೇಶಗಳನ್ನು ಮೊದಲು 7 ನಿಮಿಷದೊಳಗೆ ಶಾಶ್ವತವಾಗಿ ಡಿಲೀಟ್ ಮಾಡಬಹುದಿತ್ತು. ಈಗ ಒಂದು ಗಂಟೆಗೂ ಹೆಚ್ಚು ಅವಧಿಯನ್ನು ನೀಡಲಾಗಿದೆ. ಮೆಸೇಜ್’ಅನ್ನು ಒತ್ತಿ ಹಿಡಿದರೆ ಈ ಆಯ್ಕೆ ಬರುತ್ತದೆ.
3) ಗ್ರೂಪಿನ ಸದಸ್ಯರು ಹೆಚ್ಚು ಬರೆದುಕೊಳ್ಳಬಹುದು: ಮೊದಲು ಗ್ರೂಪಿನಲ್ಲಿ ಕೆಲ ಅಕ್ಷರಗಳನ್ನು ಮಾತ್ರ ನಮೂದಿಸಬಹುದಿತ್ತು. ಈಗ 500 ಪದಗಳವರೆಗೂ ಬರೆದುಕೊಳ್ಳಬಹುದು.
4) ಗ್ರೂಪ್ ವಿಡಿಯೋ ಕಾಲಿಂಗ್: ವಾಟ್ಸ’ಪ್ ಗ್ರೂಪ್ ವಿಡಿಯೋ ಕಾಲಿಂಗ್’ನಲ್ಲಿ ಏಕ ಕಾಲದಲ್ಲಿ 4 ಜನರೊಂದಿಗೆ ನಾಲ್ವರೊಂದಿಗೆ ಮಾತನಾಡಬಹುದು.
5) ಲೊಕೇಷನ್ ಹಾಗೂ ಟೈಮ್ ಸ್ಟಿಕರ್ಸ್: ವಾಟ್ಸಪ್’ನಲ್ಲಿ ಲೊಕೇಷನ್ ಸೇರಿಸಿಕೊಳ್ಳಬಹುದು ಹಾಗೂ ನಿಮಗೆ ಬೇಕಾದವರೊಂದಿಗೆ ಪೋಟೊ, ವಿಡಿಯೋದೊಂದಿಗೆ ಟೈಮ್ ಸ್ಟಿಕರ್ಸ್’ಗಳನ್ನು ಶೇರ್ ಮಾಡಿಕೊಳ್ಳಬಹುದು.
6) ವಾಯ್ಸ್’ನಿಂದ ವಿಡಿಯೋಗೆ ಬದಲಾಯಿಸಿಕೊಳ್ಳಬಹುದು: ಬಳಕೆದಾರರು ವಾಯ್ಸ್ ಕಾಲ್ ಮಾಡುತ್ತಲೆ ಅದನ್ನು ವಿಡಿಯೋ ಕಾಲ್’ಗೆ ಬದಲಾಯಿಸಿಕೊಳ್ಳಬಹುದು. ಆದರೆ ಇದನ್ನು ಅನುಮತಿಸುವ ಮೊದಲು ಕಾಲ್ ಮಾಡುವವರ ಒಪ್ಪಿಗೆ ಬೇಕಾಗುತ್ತದೆ.
7) ಆಪಲ್ ಕಾರ್’ಪ್ಲೈ’ನೊಂದಿಗೆ ಸಂಪರ್ಕ: ವಾಟ್ಸಪ್ ಆಪರ್ ಕಾರ್’ಪ್ಲೈ’ನೊಂದಿಗೆ ಸಂಪರ್ಕ ನೀಡಲಾಗಿದ್ದು ಐಫೋನ್ ಹಾಗೂ ಐಪಾಡ್ ಬಳಕೆದಾರರು ತಮ್ಮ ಸಂಪರ್ಕದಾರರ ಮಾಹಿತಿಗಳ ನೋಟಿಫಿಕೇಷನ್ ಪಡೆದುಕೊಳ್ಳಬಹುದು.
8) ಯುಟ್ಯೂಬ್’ನೊಂದಿಗೆ ಸಂಪರ್ಕ: ವಾಟ್ಸ’ಪ್ ಬಳಕೆದಾರರು ಯೂಟ್ಯೂಬ್ ವಿಡಿಯೋಗಳೊಂದಿಗೆ ನೇರವಾಗಿ ಚಾಟ್ ಮಾಡಬಹುದು. ಯುಟ್ಯೂಬ್ ವಿಡಿಯೋಗಳನ್ನು ಎಷ್ಟು ಬೇಕೋ ಅಷ್ಟು ಹಿಗ್ಗಿಸಿ ಕುಗ್ಗಿಸಿಕೊಳ್ಳಬಹುದು.
9) ಐಕಾನ್’ಗಳನ್ನು ಬದಲಿಸಿಕೊಳ್ಳಬಹುದು: ವಾಟ್ಸ’ಪ್ ಲೋಗೊವಿನ ಶೇಪ್’ಗಳನ್ನು ತಮ್ಮ ಮೊಬೈಲ್ ಆಯ್ಕೆಗೆ ತಕ್ಕಂತೆ ಯಾವ ರೀತಿ ಬೇಕೋ ಆ ರೀತಿ ಬದಲಿಸಿಕೊಳ್ಳಬಹುದು.
10) ಸ್ಪೆಷಲ್ ಲೈವ್ ಲೊಕೇಷನ್: ಬಳಕೆದಾರರು ಗ್ರೂಪಿನೊಂದಿಗೆ ಹಾಗೂ ವೈಯುಕ್ತಿಕವಾಗಿ ಲೈವ್ ಆಗಿ ಲೊಕೇಷನ್’ಗಳನ್ನು ಶೇರ್ ಮಾಡಿಕೊಳ್ಳಬಹುದು. ಇದರಲ್ಲಿ ಯೂಸರ್’ನ ಫೋಟೊ ಷೇರ್ ಮಾಡುವ ಬಳಕೆದಾರರಿಗೆ ಕಾಣಿಸಿಕೊಳ್ಳಲಿದೆ.
Comments are closed.