ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಾಗುತ್ತಿರುವ ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅದ್ಭುತ ಕ್ಯಾಚ್ ಹಿಡಿದಿರುವ ಭಾರತೀಯ ವೇಗಿ ಶಾರ್ದೂಲ್ ಠಾಕೂರ್ ಗಮನ ಸೆಳೆದಿದ್ದಾರೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಇದರಂತೆ ಯುಜ್ವೇಂದ್ರ ಚಹಲ್ ಎಸೆದ ಪಂದ್ಯದ ನಾಲ್ಕನೇ ಓವರ್ನಲ್ಲಿ ಬೌಂಡರಿ ಗೆರೆ ಫೀಲ್ಡಿಂಗ್ ಮಾಡುತ್ತಿದ್ದ ಠಾಕೂರ್ ಅಮೋಘ ಕ್ಯಾಚ್ ಹಿಡಿದಿದ್ದರು.
ಚೆಂಡು ಇನ್ನೇನು ಸಿಕ್ಸ್ ಗೆರೆ ದಾಟುತ್ತಿದೆ ಎನ್ನುವಷ್ಟರಲ್ಲಿ ಅದ್ಭುತವಾಗಿ ಮೇಲಕ್ಕೆ ಡೈವ್ ಹೊಡೆದ ಠಾಕೂರ್ ಕ್ಯಾಚ್ ಹಿಡಿದಿದ್ದರು. ಈ ಮೂಲಕ ಅದ್ಭುತ ಸಮತೋಲನವನ್ನು ಕಾಪಾಡಿಕೊಂಡಿದ್ದರು.
ಇದರೊಂದಿಗೆ ಅತ್ಯುತ್ತಮವಾಗಿ ಆಡುತ್ತಿದ್ದ ತಮೀಮ್ ಇಕ್ಬಾಲ್ (15) ವಿಕೆಟ್ ಒಪ್ಪಿಸುವಂತಾಗಿತ್ತು. ಒಟ್ಟಿನಲ್ಲಿ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರಿಂದ ಇಂತಹದೊಂದು ಪ್ರದರ್ಶನವನ್ನು ಎದುರು ನೋಡಲಾಗಿತ್ತು.
ಓರ್ವ ಬೌಲರ್ ಆಗಿರುವ ಹೊರತಾಗಿಯೂ ಶಾರ್ದೂಲ್ ತೋರಿರುವ ಅರ್ಪಣಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Comments are closed.