ಸಾಗರ: ಕಾಮುಕ ಶಿಕಷಕನೊಬ್ಬ ತನ್ನ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.
ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರಕಾಶ್ ನನ್ನು ಪೋಲೀಸರು ಬಂಧಿಸಿದ್ದು ಪೋಸ್ಕೋ ಹಾಗೂ ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರೌಢ ಶಾಲೆಯಲ್ಲಿ ಒದುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮನೆ ಸಮೀಪದಲ್ಲೇ ವಾಸವಿದ್ದ ಶಿಕ್ಷಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಪಾಠ ಹೇಳುವುದಾಗಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ. ಹೀಗೆ ವಿದ್ಯಾರ್ಥಿನಿಯನ್ನು ಕರೆಸಿದ ಆತ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಅಷ್ಟೇ ಅಲ್ಲ ಹಲವಾರು ಬಾರಿ ಇದೇ ರೀತಿ ಅತ್ಯಾಚಾರ ನಡೆಸಿದ್ದು ಅದೊಮ್ಮೆ ವಿದ್ಯಾರ್ಥಿನಿಯ ಪೋಷಕರಿಗೆ ಈ ವಿಚಾರ ತಿಳಿದಿದೆ.
ಮಾಹಿತಿ ತಿಳಿದ ಪೋಷಕರು ಶಿಕ್ಷಕನ ವಿರುದ್ಧ ದೂರು ಕೊಟ್ಟಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸಾಗರ ಪಟ್ಟಣ ಠಾಣೆ ಪೋಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.
Comments are closed.