ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 15 ಕ್ಷೇತ್ರಗಳಿಂದ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಚುನಾವಣಾ ಆಯೋಗ ನಮ್ಮ ಪಕ್ಷದ ಚಿಹ್ನೆಗೆ ಅನುಮೋದನೆ ನೀಡಿದೆ. ಬೆಂಡೆಕಾಯಿ ಚಿಹ್ನೆಗೆ ಆಯೋಗ ಸಮ್ಮತಿಸಿದ್ದು 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಅನುಪಮಾ ಶೆಣೈ ತಿಳಿಸಿದ್ದಾರೆ.
ಕೂಡ್ಲಿಗಿ ಡೆಪ್ಯೂಟಿ ಸೂಪರಿಂಟೆಂಡ್ ಆಪ್ ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅನುಪಮಾ ಶೆಣೈ 2016ರ ಜೂನ್ ನಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ನವೆಂಬರ್ ನಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದರು.
ಉಡುಪಿಯ ಕಾಪ್ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಎಲ್ಲಾ 30 ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ. ಕೋಮು ಸೌಹಾರ್ದ ಕಾಪಾಡುವುದು ಬಿಜೆಸಿ ಯ ಮುಖ್ಯ ಗುರಿಯಾಗಿದೆ. ಜೊತೆಗೆ ಸಾರಾಯಿ ನಿಷೇಧ ಮಾಡುವುದು ನಮ್ಮ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
Comments are closed.