ರಾಷ್ಟ್ರೀಯ

‘ಮೋದಿ ಮುಕ್ತ ಭಾರತ’ಕ್ಕೆ ರಾಜ್ ಠಾಕ್ರೆ ಕರೆ

Pinterest LinkedIn Tumblr

ಮುಂಬೈ: ಮೋದಿ ಮುಕ್ತ ಭಾರತಕ್ಕೆ ಮಹರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ.

ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಗುಡಿ ಪಾಡ್ವ ಪ್ರಯುಕ್ತ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ನಾವು ಮೂರನೇ ಸ್ವಾತಂತ್ರ್ಯಕ್ಕಾಗಿ ಸಜ್ಜಾಗಬೇಕಿದೆ. ಮೋದಿ ಮುಕ್ತ ಭಾರತ ನಿಜವಾಗಲು ಎಲ್ಲಾ ರಾಜಕೀಯ ಪಕ್ಷಗಳ ಒಂದಾಗಬೇಕಿದೆ ಎಂದರು.

ಸುಮಾರು ಒಂದು ಗಂಟೆ ಕಾಲ ಸುದೀರ್ಘ ಭಾಷಣ ಮಾಡಿದ ಅವರು, ಭವಿಷ್ಯದಲ್ಲಿ ದೇಶಾದ್ಯಂತ ದಂಗೆಯೆಬ್ಬಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದ್ದು ಅವುಗಳ ಬಗ್ಗೆ ಎಚ್ಚರಿಕೆಯಿರಬೇಕು ಎಂದರು.

ಉತ್ತರ ಪ್ರದೇಶ ಮತ್ತು ಬಿಹಾರ ಉಪ ಚುನಾವಣೆಯಲ್ಲಿ ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಗೆ ಸೋಲುಂಟಾಗಿದ್ದು ಎಲ್ಲಾ ವಿರೋಧ ರಾಜಕೀಯ ಪಕ್ಷಗಳು ಒಂದಾಗಲು ಕೂಗು ಹೆಚ್ಚಾಗುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರ್ಕಾರವನ್ನು ಮಣಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗುವುದೊಂದೇ ಇದಕ್ಕಿರುವ ಮಾರ್ಗ ಮತ್ತು ಪರಿಹಾರ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

Comments are closed.