ಮಂಗಳೂರು ಮಾರ್ಚ್ 19 : ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಮಾ.20ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಚ್ 20 ರಂದು ಬೆಳಿಗ್ಗೆ 10.20ಕ್ಕೆ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಆಗಮಿಸುವರು.
ನಾಳೆ 11.15 ಗಂಟೆಗೆ, ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಾಗತ, 11.30 ಗಂಟೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ಗೆ ತೆರಳಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.30 ಗಂಟೆಗೆ ಮೂಲ್ಕಿಯಲ್ಲಿ ರೋಡ್ ಷೋ ಕಾರ್ಯಕ್ರಮ, ಸಂಜೆ 4.20 ಗಂಟೆಗೆ ಸುರತ್ಕಲ್ನಲ್ಲಿ ರೋಡ್ ಷೋ -ಸಾರ್ವಜನಿಕ ಸಭೆ, 5.20 ಕ್ಕೆ ನಗರದ ಜ್ಯೋತಿ ಅಂಬೇಡ್ಕರ್ ಸರ್ಕಲ್ನಿಂದ ಸಿಗ್ನಲ್ ಪಾಯಿಂಟ್ ಸರ್ಕಲ್ವರೆಗೆ ರೋಡ್ ಷೋ, ಸಂಜೆ 6 ಗಂಟೆಗೆ ಮಂಗಳೂರು ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.
ರಾತ್ರಿ 7.30 ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ರೊಝಾರಿಯೋ ಚರ್ಚ್ ಹಾಗೂ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ಮಂಗಳೂರು ಸಕ್ರ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡುವರು.
ಮಾರ್ಚ್ 21 ರಂದು ಬೆಳಿಗ್ಗೆ 8.30 ಕ್ಕೆ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಬ್ಲಾಕ್ ಅಧ್ಯಕ್ಷರ ಸಭೆ, 9.30ಕ್ಕೆ ಉಭಯ ಜಿಲ್ಲೆಗಳ ಹಿರಿಯ ಮುಖಂಡರ ಸಭೆಯಲ್ಲಿ ಭಾಗವಹಿಸಿ, 10.20 ಗಂಟೆಗೆ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳುವರು.
Comments are closed.