ಬೆಂಗಳೂರು/ಶಿವಮೊಗ್ಗ: ದಿ.ಡಾ.ರಾಜ್ ಕುಮಾರ್ ಕುಟುಂಬಕ್ಕೆ ವಿವಾಹ ಸಂಭ್ರಮ. ಹಿರಿಯ ಪುತ್ರಿ ಲಕ್ಷ್ಮೀ ಹಾಗೂ ಅಳಿಯ ಗೋವಿಂದರಾಜು’ ರ ಪುತ್ರ ‘ಶಾನ್’ ರ ಮದುವೆ ಕಳೆದ ನವೆಂಬರ್ ನಲ್ಲಿ ನಿಶ್ಚಯವಾಗಿತ್ತು. ಇಂದು (26 ರಂದು) ‘ಶಾನ್’ (ಷಣ್ಮುಖ) ರ ಮದುವೆ ಶಿವಮೊಗ್ಗದಲ್ಲಿ ನಡೆಯಲಿದೆ.
ಸಾಗರ ನಗರದ ವಕೀಲ ಬರೂರು ನಾಗರಾಜ್ ಮಗಳು ‘ಸಿಂಧೂ’ ರನ್ನು ‘ಶಾನ್’ ವಿವಾಹವಾಗುತ್ತಿದ್ದಾರೆ. ಸಿಂಧೂ ಸಾಗರ ಮೂಲ ದವರು. ಮದುವೆ ಸಮಾರಂಭ ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. ಶಾನ್ ಮತ್ತು ಸಿಂಧೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮದುವೆಗೆ ಬನ್ನಿ ಎಂದು ಆಹ್ವಾನ ನೀಡು ತ್ತಿದ್ದಾರೆ.
ಶಿವರಾಜ್ ಕುಮಾರ್ ‘ಕವಚ’ ಚಿತ್ರೀಕರಣಕ್ಕಾಗಿ ಶಿವಮೊಗ್ಗದಲ್ಲೇ ಉಳಿದು ಕೊಂಡಿದ್ದು ರಾಜ್ ಕುಟುಂಬಸ್ಥರು ಹಾಗೂ ಸ್ನೇಹಿತರು ಮದುವೆ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Comments are closed.