ಯು ಏ ಇ ಯ ಮಣ್ಣಲ್ಲಿ ಕನ್ನಡ ಸಂಗೀತದ ಗಾಳಿ ಬೀಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ , ಶ್ರೀ ಲಲಿತ್ಈವೆಂಟ್ಸ್ ) ( ಎಸ್ ಎಲ್ ಈವೆಂಟ್ಸ್ ) ಇದರ ಸಹಯೋಗದೊಂದಿಗೆ ಕನ್ನಡಿಗರು ದುಬೈ ಅರ್ಪಿಸುವ ಖ್ಯಾತ ಸ್ಯಾಂಡಲ್ ವುಡ್ ಗಾಯಕ ಮತ್ತು ಸಂಗೀತಗಾರ ಅರ್ಜುನ್ ಜನ್ಯ ಅವರು ಸಾರಥ್ಯ ನೀಡುವ ಸಂಗೀತ ಸೌರಭ -2018 (ಸಂಗೀತ ಸಂಜೆ) ಊದ್ ಮೆಹ್ತಾ ಮೆಟ್ರೋ ಸ್ಟೇಷನ್ ಬಳಿ ಇರುವ ಶೇಕ್ ರಾಶಿದ್ ಸಭಾಂಗಣದಲ್ಲಿ ಇದೆ ಬರುವ ಶುಕ್ರವಾರ ಮಾರ್ಚ್ 30ರಂದು ಸಂಜೆ 6 ಗಂಟೆಗೆ ಸರಿಯಾಗಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಅರ್ಜುನ್ ಜನ್ಯ ಅವರೊಂದಿಗೆ ದುಬೈಯ ಖ್ಯಾತ ಗಾಯಕ ಹರೀಶ್ ಶೇರಿಗಾರ್, ಇತರ ಗಾಯಕರಾದ ವ್ಯಾಸರಾಜ್ , ಅಜಯ್ ವಾರಿಯರ್ , ಅನುರಾಧ ಭಟ್, ಅನುಪಮಾ ಭಟ್, ಇಂದು ನಾಗರಾಜ್ ಮುಂತಾದ ಕಲಾ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಕನ್ನಡಿಗ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ನೆರವೇರಲಿದ್ದು ಕಾರ್ಯಕ್ರಮದ ಮ್ಲೇವಿಚಾರಣೆ ಶ್ರೀಯುತ ಸದನ್ ದಾಸ್ ಅವರು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನಾ ಭಾಷಣ ಮತ್ತು ವಿವರಣೆಯನ್ನು ಸಂಗೀತ ಸೌರಭ -2018 ರ ಉಸ್ತುವಾರಿ ಮುಖಂಡರಾದ ಶ್ರೀಯುತ ಅರುಣ್ ಕುಮಾರ್ ಎಂ ಕೆ ಬೆಂಗಳೂರು ಅವರು ನೆರವೇರಿಸಲಿದ್ದಾರೆ , ಅದಲ್ಲದೆ ಯುಎಇ ದೇಶದಲ್ಲಿ ನೆಲಸಿರುವ ಅನೇಕ ಅನಿವಾಸಿ ಕನ್ನಡಿಗರ ಪ್ರಮುಖರು ನೇತಾರರು ಬಾಗವಹಿಸಲಿದ್ದಾರೆ ,
ಸಂಗೀತ ಸಂಜೆಯ ಟಿಕೆಟ್ ದರವು 100, 50, 25 ಎಂದು ವಿಂಗಡಿಸಿದ್ದು ಹೆಚ್ಚಿನ ವಿವರಗಳಿಗೆ ಮತ್ತು ಟಿಕೆಟ್ಗಳಿಗಾಗಿ ಈ ಕೆಳಗೆ ನಮೂದಿಸಿದ ನಂಬರುಗಳನ್ನು ಸಂಪರ್ಕಿಸಿ ( 0567012123 0507576238, 0502433263, 0569916774, 0509520336, 0558223389, 0504587390, 0521138422, 0506125464, 0557334228)
ಯು ಎ ಇ ಯಲ್ಲಿ ನೆಲಸಿರುವ ಸಮಸ್ತ ಕನ್ನಡ ಭಾಂದವರನ್ನು ಇಂಡಿಯನ್ ಹೈಸ್ಕೂಲ್ ರಶೀದ್ ಆಡಿಟೋರಿಯಂಗೆ ಹೃತ್ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ.
Comments are closed.