ರಾಷ್ಟ್ರೀಯ

ಅಂಬೇಡ್ಕರ್ ಹೆಸರಲ್ಲಿ “ರಾಮ್ ಜಿ” ಸೇರಿಸಲು ಯೋಗಿ ಸರಕಾರ ಆದೇಶ !

Pinterest LinkedIn Tumblr


ಲಖನೌ: ಭಾರತ ಸಂವಿಧಾನದ ಪಿತಾಮಹಾ ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ ತಂದೆ ‘ರಾಮ್‌ಜಿ’ ಅವರ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥರ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಅದರೊಂದಿಗೆ ಇನ್ನು ಮುಂದೆ ಎಲ್ಲ ಸರ್ಕಾರಿ ದಾಖಲೆಗಳಲ್ಲೂ ಅಂಬೇಡ್ಕರ್ ಅವರ ಹೆಸರಿನಲ್ಲಿ ರಾಮ್‌ಜಿ ಕೂಡ ಸೇರ್ಪಡೆಯಾಗಲಿದೆ.

ಉತ್ತರ ಪ್ರದೇಶದ ರಾಜ್ಯಪಾಲರಾದ ರಾಮ ನಾಯಕ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅವರ ತಂದೆ ರಾಮ್‌ಜಿ ಅವರ ಹೆಸರನ್ನೂ ಆ ಮೂಲಕ ಅವರ ಹೆಸರನ್ನು ಭೀಮರಾಮ್ ರಾಮ್‌ಜಿ ಅಂಬೇಡ್ಕರ್ ಆಗಿ ಬದಲಾಯಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸನ್ನು ಒಪ್ಪಿರುವ ಯೋಗಿ ಆದಿಥ್ಯನಾಥ್ ಸರಕಾರ ತನ್ನ ಎಲ್ಲ ಇಲಾಖೆಗಳಿಗೂ ಈ ವಿಚಾರವಾಗಿ ಸೂಚನೆ ಹೊರಡಿಸಿದೆ ಜತೆಗೆ ಅಲಹಬಾದ್ ಹೈ ಹಾಗೂ ಲಖನೌ ಕೋರ್ಟ್‌ಗಳಿಗೂ ಪತ್ರ ಬರೆದು, ಎಲ್ಲ ಕಡತಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ರಾಮ್‌ಜಿ ಸೇರಿಸುವಂತೆ ಸೂಚನೆ ನೀಡಿದೆ.

ಯೋಗಿ ಸರ್ಕಾರದದ ಈ ನಡೆ ರಾಜಕೀಯ ರೂಪಪಡೆದಿದ್ದು, ವಿರೋಧ ಪಕ್ಷಗಳು ಟೀಕಿಸಿವೆ. ಈ ವಿಚಾರವಾಗಿ ಸಮಾಜವಾದಿ ಪಕ್ಷದ ನಾಯಕ ದೀಪಕ್ ಮಿಶ್ರಾ ಪ್ರತಿಕ್ರಿಯಿಸಿದ್ದು, ‘ದಲಿತರ ಪ್ರತೀಕವಾಗಿರುವ ಅಂಬೇಡ್ಕರ್ ಅವರ ಹೆಸರಿನಲ್ಲಿ ಸರಕಾರ ರಾಜಕೀಯ ಮಾಡಲು ಹೊರಟಿದೆ. ಬಿಜೆಪಿ ಅಂಬೇಡ್ಕರ್ ಅವರ ಆಲೋಚನೆಗಳನ್ನು ಗೌರವಿಸುವುದಿಲ್ಲ. ಆದರೂ ಮತಬ್ಯಾಂಕ್‌ಗಾಗಿ ಈ ಹೆಸರು ಬದಲಾಯಿಸಲು ಮುಂದಾಗಿದೆ’ ಎಂದು ಕಿಡಿಕಾರಿದ್ದಾರೆ.ಈ ಬಗ್ಗೆ ರಾಜ್ಯಪಾಲರಾದ ರಾಮ ನಾಯಕ್ ಕೂಡ ಸ್ಪಷ್ಟನೆ ನೀಡಿದ್ದು, ‘ನಾನು ಕೂಡ ಮರಾಠಿಗನೆ. ಹಿಂದಿ ಭಾಷಿಗರ ರಾಜ್ಯಗಳಲ್ಲಿ ಅಂಬೇಡ್ಕರ್ ಅವರಹೆಸರನ್ನು ತಪ್ಪಾಗಿ ಬರೆಯಲಾಗುತ್ತಿದೆ. ಹೆಸರನ್ನು ಭೀಮ್‌ರಾವ್ ಬದಲಿಗೆ ಭಿಮ್ ಮತ್ತು ರಾವ್ ಎಂದು ಬಿಡಿಸಿ ಬರೆಯಲಾಗುತ್ತದೆ’ ಎಂದಿದ್ದಾರೆ.

Comments are closed.