ಕರ್ನಾಟಕ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೊಳಿಸುವುದೇ ಬಿಜೆಪಿ ಸಂಕಲ್ಪ: ಅನಂತಕುಮಾರ

Pinterest LinkedIn Tumblr


ಬೆಂಗಳೂರು: ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲು ಬಿಜೆಪಿ ಸಂಕಲ್ಪ ತೊಟ್ಟಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜೈನ್ ಯುವ ಸಂಘಟಣೆ ಆಯೀಜಸಿದ್ದ ಭಗವಾನ್ ಮಹಾವೀರರ 2617ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಗೋ ಹತ್ಯೆ ನಿಷೇಧದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಗೋಹತ್ಯೆ ನಿಷೇಧ ಜಾರಿಗೊಳಿಸುವ ಸಂಕಲ್ಪ ತೊಡಲಾಗಿದೆ ಎಂದರು.

ಸರಕಾರ ಯಾವುದೇ ಇರಲಿ. ಸರಕಾರ ಆಯ್ಕೆ ಮಾಡುವುದರಲ್ಲಿ ಮಾನದಂಡ ಒಂದೇ ಇರಬೇಕು. ಮಹಾವೀರನ ಆಶಯದಂತೆ ನಡೆದುಕೊಂಡು ಹೋಗುವವರಿಗೆ ನಿಮ್ಮ ಬೆಂಬಲ ನೀಡಿ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತ ಪಕ್ಷಕ್ಕೆ ಜೈನ ಸಮುದಾಯದ ಸಹಕಾರವಿರಲಿ ಎಂದು ಪರೋಕ್ಷವಾಗಿ ಬಿಜೆಪಿ ಪರವಾಗಿ ಮತಯಾಚಿಸಿದರು.

ಪ್ರಧಾನಿ ಮೋದಿ ಭಗವಾನ್ ಮಹಾವೀರನ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಶೇ.100ರಷ್ಟು ಶಾಖಾಹಾರಿ, ಅಹಿಂಸಾವಾದಿ. ವಿದೇಶಕ್ಕೆ ಪ್ರವಾಸ ಹೋದರು ಆಹಾರ ಅವರು ಬದಲಾಯಿಸುವುದಿಲ್ಲ. ಜೈನಮುನಿಗಳ ಪ್ರೇರಣೆಯಿಂದ ನವರಾತ್ರಿ ವೇಳೆ ಕಠಿಣ ಉಪವಾಸ ಆಚರಣೆ ಮಾಡುತ್ತಾರೆ. ಮಹಾವೀರ ಜೀವನ ಮತ್ತು ಸಿದ್ಧಾಂತಗಳ ಮೇಲೆ ವರು ಕೇಂದ್ರ ಸರಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

Comments are closed.