ಮಂಡ್ಯ: ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಭಾವಿ ಮುಖ್ಯಮಂತ್ರಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಸಾವಯವ ರೈತ ಮಹಿಳಾಕೂಟದಲ್ಲಿ ಭಾಗವಹಿಸಿದ ಅಮಿತ್ ಶಾ ಕೃಷಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು.
ಮೋದಿಯವರು ಕೃಷಿಗೆ ಸಾಕಷ್ಟು ಒತ್ತು ನೀಡಿದ್ದಾರೆ. ಯದ್ವಾತದ್ವಾ ರಾಸಾಯನಿಕ ಬಳಕೆಯಿಂದ ಜನರ ಹಾಗೂ ಭೂಮಿ ಆರೋಗ್ಯ ಹದಗೆಟ್ಟಿದ್ದು ಅದನ್ನು ಸರಿಪಡಿಸಬೇಕಿದೆ. 2ನೇ ಹಸಿರು ಕ್ರಾಂತಿ ಮಾಡಲು ಮುಂದಾಗಿದ್ದೇವೆ. ನಮ್ಮ ದೇಶದ ಕೃಷಿ ಅವೈಜ್ಞಾನಿಕ ಎನ್ನುತ್ತಿದ್ದರು. ಆದರೆ ನಮ್ಮ ಹಳೆಯ ಪದ್ಧತಿ ಕೃಷಿಯೇ ಶ್ರೇಷ್ಠವೆಂದು ಜಗತ್ತು ಒಪ್ಪಿಕೊಂಡಿದೆ. ಸಿಕ್ಕಿಂ ರಾಜ್ಯವನ್ನು ಸಂಪೂರ್ಣ ಸಾವಯವ ಕೃಷಿ ರಾಜ್ಯಮಾಡಲು ಮೋದಿಯವರು ನಿರ್ಧರಿಸಿದ್ದಾರೆ ಎಂದರು.
ಮಂಡ್ಯದಲ್ಲಿ ಸಾವಯವ ರೈತ ಮಹಿಳಾಕೂಟದ ಸದಸ್ಯರೊಂದಿಗೆ ಊಟ ಮಾಡಿದ ಅಮಿತ್ ಶಾ
ರಸಗೊಬ್ಬರ ಉಪಯೋಗದಿಂದ ಭೂಮಿ ಫಲವತ್ತತೆ ಹಾಳಾಗಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಸಾವಯವ ಕೃಷಿಗೆ ಹೆಸರಾದ ಭಾರತ ಕೆಲ ಪಾಶ್ಚಾತ್ಯ ತಜ್ಞರು ವೈಜ್ಞಾನಿಕತೆ ಕೊರತೆಯಿಂದ ಸಾವಯವ ಕೃಷಿ ಮಾಡ್ತಿದ್ದಾರೆ ಅಂತ ಹೇಳುತ್ತಾರೆ. ಆದರೆ ಜೈವಿಕ, ಸಾವಯವ ಕೃಷಿ ಇಡೀ ವಿಶ್ವದಲ್ಲಿ ಆಧುನಿಕ ಕೃಷಿಯಾಗಿ ಮಾರ್ಪಟ್ಟಿದೆ.ವಕಳೆದ ಮೂರುವರೆ ವರ್ಷದಲ್ಲಿ ಮೋದಿ ಸರ್ಕಾರ ಕೃಷಿ ವಿಕಾಸ ಯೋಜನೆ ಜಾರಿಗೆ ತಂದಿದ್ದು, ಸಾವಯವ ಕೃಷಿ ಉತ್ತೇಜನ ಬುಡಕಟ್ಟು ಜನ ಸೇರುವ ಪ್ರದೇಶ ಸಿಕ್ಕಿಂ ರಾಜ್ಯವನ್ನ ಸಾವಯವ ರಾಜ್ಯ ಅಂತ ಘೋಷಿಸಲಾಗಿದೆ. ಈ ಸಾವಯವ ಕೃಷಿಗೆ ಉತ್ತೇಜನ ನೀಡುವ ರಾಷ್ಟ್ರೀಯ ಕೇಂದ್ರ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರ ಫಸಲ್ ಭಿಮಾ ಯೋಜನೆ ೬೧೬೨ ಕೋಟಿ ಕೊಟ್ಟರೆ, ಮೋದಿ ಸರ್ಕಾರ ೩೩, ೬೬೨ ಕೋಟಿ ಕೊಟ್ಟಿದೆ. ಕೃಷಿ ಯಾಂತ್ರಿಕರಣಕ್ಕೆ ೨೪೦೦ ಕೋಟಿ ಬಿಡುಗಡೆ ಮಾಡಿದ್ದೇವೆ. ಮಳೆ ಬೇಸಾಯದ ಅಭಿವೃದ್ಧಿಗಾಗಿ ೧೩೨೨ ಕೋಟಿ ಹಾಗೂ ಡೈರಿ ವಿಕಾಸಕ್ಕೆ ೧೦೭೨೫ ಕೋಟಿ ಬಿಡುಗಡೆ ಮಾಡಿದ್ದೇವೆ. ಯಡಿಯೂರಪ್ಪ ಸರ್ಕಾರ ಬಂದಲ್ಲಿ ಎಲ್ಲಾ ಸಾವಯವ ಉತ್ಪನ್ನ ಮಾರುಕಟ್ಟೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ. ಆದರೆ ಬಿಜೆಪಿ ಸರ್ಕಾರ ರಾಜ್ಯಗಳಲ್ಲಿ ಆತ್ಮಹತ್ಯೆ ಕ್ಷೀಣ. ಮಹರಾಷ್ಟ್ರದಲ್ಲಿ ಇತ್ತೀಚೆಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಲ್ಲಿ ಶೇ ೩೦ ರಷ್ಟು ಅಲ್ಲಿ ಆತ್ಮಹತ್ಯೆ ನಿಯಂತ್ರಣವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಲ್ಲಿ ರೈತರಿಗೆ ಸಮರ್ಪಣೆ ಎಂದು ನುಡಿದರು.
Comments are closed.