01
ಗೊರಖ್ಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೆಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕಾಂಗ್ರೆಸ್‌ಸ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟು ಮೊಕದ್ದಮೆ ಹೂಡಲಾಗಿದೆ.
“ದೆಹಲಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ರಾಹುಲ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನೀರವ್ ಮೋದಿ(ಆರ್ಥಿಕ ಅಪರಾಧಿ) ಮತ್ತು ಲಲಿತ್ ಮೋದಿ(ಐಪಿಎಲ್ ಮಾಜಿ ಕಮಿಷನರ್) ನಡುವೆ ನಂಟಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು” ಎಂದು ಬಿಜೆಪಿ ವಕ್ತಾರ ಶಲಭ್ ಮಣಿ ತ್ರಿಪಾಠಿ ಆರೋಪ ಮಾಡಿದ್ದಾರೆ.
ಈ ಕುರಿತಂತೆ, ಗಾಂಧಿ ವಂಶದ ಕುಡಿ ವಿರುದ್ಧ ದೇವೊರಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ 499 ಹಾಗು 500 ಅನುಚ್ಛೇದಗಳ ಅಡಿ ಮಾನಹಾನಿ ದಾಖಲಿಸಲಾಗಿದೆ.
ಸಮಾವೇಶದಲ್ಲಿ, ಭ್ರಷ್ಟಾಚಾರದ ಅನ್ವರ್ಥನಾಮವಾಗಿ ಮೋದಿ ಎಂಬ ಹೆಸರು ಖ್ಯಾತಿ ಪಡೆದಿದೆ ಎಂದು ರಾಹುಲ್ ಹೇಳಿದ್ದಾಗಿ ತ್ರಿಪಾಠಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷನ ಮಾತುಗಳಿಂದಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗು ದೇಶಬವಾಸಿಗಳ ಭಾವನೆಗಳಿಗೆ ನೋವುಂಟಾಗಿದ್ದು ಮಾನಹಾನಿ ಪ್ರಕರಣ ದಾಖಲಿಸುತ್ತಿರುವುದಾಗಿ ಬಿಜೆಪಿ ನಾಯಕ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಜಿಲ್ಲಾ ಕಾರ್ಯದರ್ಶಿ ಅನ್ವರ್ ಹುಸೇನ್, “ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಲು ಸಿದ್ಧರಿದ್ದೇವೆ. ದೇಶಕ್ಕಾಗಿ ಜೈಲು ಸೇರಲೂ ಸಿದ್ಧರಿದ್ದೇವೆ” ಎಂದಿದ್ದಾರೆ.
ಪಕ್ಷದ ರಾಷ್ಟ್ರ ಮಟ್ಟದ ಸಮಾವೇಶಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ನೀರವ್ ಮೋದಿ ಹಾಗು ಲಲಿತ್ ಮೋದಿರೊಂದಿಗೆ ರಾಹುಲ್ ಗಾಂಧಿ ತುಲನೆ ಮಾಡಿದ್ದರು.
Comments are closed.