ಅಂತರಾಷ್ಟ್ರೀಯ

ಹಾಕಿ ಆಟಗಾರ್ತಿಯೊಬ್ಬಳು ಪಂದ್ಯದ ಮಧ್ಯೆಯೇ ಶಿಶುವಿಗೆ ಹಾಲುಣಿಸಿದ ಫೋಟೋ ವೈರಲ್ ! ಈ ಫೋಟೋ ಕ್ಲಿಕ್ ಮಾಡಿದ್ದು ಯಾರು ?

Pinterest LinkedIn Tumblr

ಮಹಿಳೆಯು ಶಿಶುವಿಗೆ ಹಾಲುಣಿಸುವ ಫೋಟೋವನ್ನು ಕೇರಳದ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಅಂತಹದ್ದೇ ಘಟನೆ ಕೆನಾಡದಲ್ಲಿ ನಡೆದಿದೆ. ಹಾಕಿ ಕ್ರೀಡಾಳುವೊಬ್ಬರು ವಿರಾಮದ ಸಮಯದಲ್ಲಿ ಮಗುವಿಗೆ ಹಾಲುಣಿಸುವ ಫೋಟೋ ವೈರಲ್ ಆಗಿದೆ.

ಕೆನಾಡದ ಅಲ್ಬರ್ಟಾ ನಗರದ ಸೆರಾಹ್ ಸ್ಮಾಲ್ ಎಂಬ ಶಿಕ್ಷಕಿ ಹಾಕಿ ಪಂದ್ಯದ ವಿರಾಮದ ವೇಳೆ ತನ್ನ 2 ತಿಂಗಳಿನ ಹಸುಗೂಸುವಿಗೆ ಲಾಕರ್ ರೂಂನಲ್ಲಿ ಹಾಲುಣಿಸಿದ್ದಾರೆ. ಆ ಸಂದರ್ಭದಲ್ಲಿ ಆಕೆಯ ತಾಯಿಯೇ ಫೋಟೋ ತೆಗೆದಿದ್ದಾರೆ. ಅದಕ್ಕಿಂದ ಸುಂದರವಾದ ದೃಶ್ಯವನ್ನು ನಾನು ಎಂದಿಗೂ ನೋಡಿಲ್ಲವೆಂದು ಅವರು ಹೇಳಿದ್ದಾರೆ. ಬಳಿಕ ಸೆರಾಹ್ ಆ ಫೋಟೋವನ್ನು ಫೇಸ್ಬುಕ್’ಗೆ ಅಪ್ಲೋಡ್ ಕೂಡಾ ಮಾಡಿದ್ದಾರೆ.

ಶಿಶುವಿಗೆ ಸಾರ್ವಜನಿಕವಾಗಿ ಹಾಲುಣಿಸುವ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಮೀರುವ ನಿಟ್ಟಿನಲ್ಲಿ ಇದು ಬಹಳ ಮುಖ್ಯವೆಂದು ಅವರು ಹೇಳಿಕೊಂಡಿದ್ದಾರೆ. ಹಾಲುಣಿಸುವ ಅವಶ್ಯಕತೆ ಯಾವಾಗ ಎಲ್ಲಿ ಉಂಟಾಗುತ್ತದೋ ಹೇಳಲಾಗುವುದಿಲ್ಲ. ಫೋಟೋವನ್ನು ಸೊಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರಿಂದ ಹೊಸ ತಾಯಿಯಂದರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಶ್ಲಾಘನೆ ವ್ಯಕ್ತಪಡಿಸಿ ಬೆಂಬಲಿಸಿದ್ದಾರೆ. ಆದರೆ ಇನ್ನು ಕೆಲವರು ಋಣಾತ್ಮಕವಾಗಿ ಕಮೆಂಟಿಸಿದ್ದಾರೆ. ತಾಯಿಯೊಬ್ಬಳು ಕುಟುಂಬ ಸದಸ್ಯರ ಮುಂದೆಯೂ ಶಿಶುವಿಗೆ ಹಾಲುಣಿಸುವಂತಿಲ್ಲ. ಈಗಲೂ ಸ್ತನಪಾನವನ್ನು ಲೈಂಗಿಕತೆಯೊಂದಿಗೆ ತಳುಕು ಹಾಕಲಾಗುತ್ತಿದೆ. ಈ ಪರಿಪಾಠ ನಿಲ್ಲಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Comments are closed.