ರಾಷ್ಟ್ರೀಯ

ಶೋಪಿಯಾನ್ ಎನ್ ಕೌಂಟರ್’ನಲ್ಲಿ 7 ಉಗ್ರರ ಸಾವು; ಇಬ್ಬರು ಯೋಧರು ಹುತಾತ್ಮ: ಎಸ್ ಪಿ ವೈದ್ ಸುದ್ದಿಗೋಷ್ಠಿ

Pinterest LinkedIn Tumblr

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಒಟ್ಟು 8 ಮಂದಿ ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ವೈದ್ ತಿಳಿಸಿದ್ದಾರೆ.

ಶ್ರೀನಗರದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಪಿಯಾನ್ ಎನ್ ಕೌಂಟರ್ ನಲ್ಲಿ ಒಟ್ಟು 7 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಅಂತೆಯೇ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಂತೆಯೇ ಇಂದು ಸಾವನ್ನಪ್ಪಿದ 7 ಉಗ್ರರ ಪೈಕಿ ಇಬ್ಬರು ಉಗ್ರರು ಈ ಹಿಂದೆ ಕೊಲೆಯಾಗಿದ್ದ ಲೆಫ್ಟಿನೆಂಟ್ ಉಮ್ಮರ್ ಫಯಾಜ್ ಅವರ ಕೊಲೆಯಲ್ಲಿ ಪಾಲ್ಗೊಂಡವರಾಗಿದ್ದರು ಎಂದು ಹೇಳಿದರು.

ಅಂತೆಯೇ ಘಟನೆಯಲ್ಲಿ ಇಬ್ಬರು ನಾಗರಿಕರು ಕೂಡ ಸಾವನ್ನಪ್ಪಿದ್ದು, ಇಬ್ಬರೂ ದ್ರಗಾದ್ ಮತ್ತು ಕಚ್ದೂರಾ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಘಟನೆಯಲ್ಲಿ ಒಟ್ಟು 25 ಮಂದಿ ನಾಗರಿಕರಿಗೆ ಪೆಲ್ಲೆಟ್ ಗನ್ ಗುಂಡೇಟು ತಗುಲಿದ್ದು, 6 ಮಂದಿಗೆ ಸಾಮಾನ್ಯ ಗುಂಡೇಟು ತಗುಲಿದೆ ಎಂದು ವೈದ್ ಮಾಹಿತಿ ನೀಡಿದರು.

Comments are closed.