ಹೊಸದಿಲ್ಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಲೀಟರ್‌ಗೆ 18 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 4 ವರ್ಷಗಳಲ್ಲೇ ಗರಿಷ್ಠ ಪೆಟ್ರೋಲ್‌ಗೆ 73.73 ಮತ್ತು ಡಿಸೇಲ್‌ಗೆ 64.50 ರೂಪಾಯಿಗೆ ಬಂದು ತಲುಪಿದೆ.
21014 ರ ಸೆಪ್ಟಂಬರ್‌ನಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 76.06 ರೂಪಾಯಿ ಆಗಿದ್ದರೆ ಡಿಸೇಲ್ ಬೆಲೆ 64.22 ರೂಪಾಯಿ ಆಗಿತ್ತು.
ಪ್ರಸಕ್ತ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಬಕಾರಿ ಸುಂಕವನ್ನು 2 ರುಪಾಯಿ ಕಡಿತಗೊಳಿಸಿದ್ದರು.
ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತದಲ್ಲೇ ಹೆಚ್ಚು , ಪಂಪ್ ದರದ ಅರ್ಧದಷ್ಟು ತೆರಿಗೆ ಇದಕ್ಕೆ ಕಾರಣವಾಗಿದೆ.
-ಉದಯವಾಣಿ
Comments are closed.