ರಾಷ್ಟ್ರೀಯ

ಭ್ರಷ್ಟಾಚಾರ ಪತ್ತೆಗೆ ಆಧಾರ್‌ ಬಳಸಲಿರುವ ಸಿವಿಸಿ: ಅಧಿಕಾರಶಾಹಿಗೆ ಕಸಿವಿಸಿ

Pinterest LinkedIn Tumblr


ಹೊಸದಿಲ್ಲಿ: ಹಲವು ಬಗೆಯ ಆರ್ಥಿಕ ಮತ್ತು ಆಸ್ತಿ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯಗೊಳಿಸಿರುವುದರಿಂದ ಅಧಿಕಾರಿಗಳು ಭ್ರಷ್ಟಾಚಾರದಿಂದ ಗಳಿಸಿದ ಸಂಪತ್ತನ್ನು ಪತ್ತೆ ಮಾಡಲು ಆಧಾರ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಮುಂದಾಗಿದೆ.

ಒಬ್ಬ ವ್ಯಕ್ತಿಯ ಕಾಯಂ ಖಾತೆ ಸಂಖ್ಯೆ (ಪಾನ್‌) ಮತ್ತು ಆಧಾರ್‌ ಕಾರ್ಡ್‌ಗಳ ಮೂಲಕ ಲಭ್ಯವಿರುವ ಮಾಹಿತಿಗಳನ್ನು ಬಳಸಿಕೊಂಡು ಕಾರ್ಡ್‌ದಾರರ ಹಣಕಾಸು ವ್ಯವಹಾರಗಳು ಸಮರ್ಪಕವಾಗಿವೆಯೇ ಎಂಬುದನ್ನು ಪತ್ತೆಮಾಡಬಹುದು ಎಂದು ಸಿವಿಸಿ ಹೇಳಿದೆ.

‘ನಾವು ಈ ಬಗ್ಗೆ ಒಂದು ಕಾರ್ಯಸೂಚಿ ಸಿದ್ಧಪಡಿಸಿದ್ದೇವೆ. ಕೆಲವು ಬಗೆಯ ತಂತ್ರಾಂಶಗಳನ್ನು ಬಳಸಿಕೊಂಡು ನವು ತನಿಖೆ ನಡೆಸಲು ನಿರ್ಧರಿಸಿದ ವ್ಯಕ್ತಿಗಳ ಸಂಪೂರ್ಣ ಆರ್ಥಿಕ ವ್ಯವಹಾರಗಳ ಮಾಹಿತಿ ಪಡೆಯಲು ಸಾಧ್ಯವೇ ಎಂದು ಪರಿಶೀಲಿಸುತ್ತೇವೆ. ಆಧಾರ್‌ ಮೂಲಕ ಹಲವು ಇಲಾಖೆಗಳಿಂದ ತನಿಖೆಗೆ ಬೇಕಿರುವ ಮಾಹಿತಿ ಪಡೆಯಲು ಸಾಧ್ಯವಿದೆ’ ಎಂದು ಕೇಂದ್ರ ಜಾಗೃತದಳ ಆಯುಕ್ತ ಕೆ.ವಿ ಚೌಧರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಸ್ಥಿರಾಸ್ತಿಗಳು ಮತ್ತು ಶೇರುಗಳ ವ್ಯವಹಾರಗಳೂ ಸೇರಿದಂತೆ ಹಣಕಾಸು ವ್ಯವಹಾರಗಳ ಮಾಹಿತಿಗಳು ನೋಂದಣಿ ಇಲಾಖೆಗಳು ಅಥವಾ ಆರ್ಥಿಕ ಗುಪ್ತಚರ ಘಟಕ (FIU) ಅಥವಾ ಇತರ ಸರಕಾರಿ ಏಜೆನ್ಸಿಗಳಿಂದ ಆದಾಯ ತೆರಿಗೆ ಅಧಿಕಾರಿಗಳಿಗೆ ಲಭ್ಯವಿವೆ ಎಂದು ಅವರು ವಿವರಿಸಿದರು.

Comments are closed.