ಹೊಸದಿಲ್ಲಿ: ಕಳೆದ ಒಂದು ತಿಂಗಳೊಳಗೆ ನೋಕಿಯಾ 6 3ಜಿಬಿ ರ್ಯಾಮ್ ಸ್ಮಾರ್ಟ್ಫೋನ್ಗೆ ಎರಡನೇ ಬಾರಿಗೆ ಬೆಲೆ ಕಡಿತವುಂಟಾಗಿದೆ.
14,999 ರೂ.ಗಳಷ್ಟಿದ್ದ ನೋಕಿಯಾ 6 3ಜಿಬಿ ರ್ಯಾಮ್ ಸ್ಮಾರ್ಟ್ಫೋನ್ಗೆ ಆರಂಭದಲ್ಲಿ 1,500 ರೂ.ಗಳಷ್ಟು ಬೆಲೆ ಕಡಿತವಾಗಿ 13,499 ರೂ.ಗಳಿಗೆ ತಲುಪಿತ್ತು. ಇದೀಗ ಮತ್ತೆ 500 ರೂ.ಗಳಷ್ಟು ಬೆಲೆ ಇಳಿಕೆಗೊಂಡು 12,999 ರೂ.ಗಳಿಗೆ ತಲುಪಿದೆ.
ಏಪ್ರಿಲ್ 04ರಂದು ನೋಕಿಯಾ ಹೊಸ ಶ್ರೇಣಿಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ. ಇದರಂತೆ ನೋಕಿಯಾ 6 ಉತ್ತರಾಧಿಕಾರಿ ಸಹ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಂತೆ ಈಗಿರುವ ಮಾದರಿಗೆ ಬೆಲೆ ಕಡಿತವುಂಟಾಗಿದೆ.
ಪ್ರಮುಖ ವೈಶಿಷ್ಟ್ಯಗಳು:
5.5 ಇಂಚುಗಳ ಸಂಪೂರ್ಣ ಎಚ್ಡಿ ಡಿಸ್ಪ್ಲೇ,
1080×1920 ಪಿಕ್ಸೆಲ್ ರೆಸೊಲ್ಯೂಷನ್,
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3,
ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ಡ್ರಾಗನ್ 430 ಪ್ರೊಸೆಸರ್,
32ಜಿಬಿ ಆಂತರಿಕ ಸ್ಟೋರೆಜ್
16ಎಂಪಿ ರಿಯರ್ ಕ್ಯಾಮೆರಾ,
8ಎಂಪಿ ಫ್ರಂಟ್ ಕ್ಯಾಮೆರಾ,
ಎಲ್ಇಡಿ ಫ್ಲ್ಯಾಶ್,
300mah ಬ್ಯಾಟರಿ,
ಕನೆಕ್ಟಿವಿಟಿ: 4ಜಿ, VoLTE, 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್ಬಿ ಓಟಿಜಿ
Comments are closed.