ಕರಾವಳಿ

ಕುಂದಾಪುರದ ಸಿದ್ದಾಪುರ ಕಾರೆಬೈಲಿನಲ್ಲಿ ಕಾಡುಕೋಣಗಳ ಕಾಟ!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರದ ಕಾರೆಬೈಲು ಎಂಬಲ್ಲಿ ಕಾಡುಕೋಣಗಳ ಉಪಟಳ ಹೆಚ್ಚಾಗಿದೆ. ಹಗಲು ರಾತ್ರಿ ಎನ್ನದೇ ಕಾಡುಕೋಣಗಳ ಓಡಾಟ ಎಗ್ಗಿಲ್ಲದೇ ಸಾಗಿದೆ.

ಸಿದ್ದಾಪುರ-ಶಂಕರನಾರಾಯಣ ರಸ್ತೆಯ ಕಾರೆಬೈಲು ಪ್ರದೇಶದಲ್ಲಿ ಹತ್ತಕ್ಕೂ ಅಧಿಕ ಕಾಡುಕೋಣಗಳು ಕಳೆದ ಕೆಲವಾರು ತಿಂಗಳಿನಿಂದ ಕಾಟ ನೀಡುತ್ತಿದೆ. ಬೆಳೆ ನಾಶ ಮಾಡುವುದು ಮಾತ್ರವಲ್ಲದೇ ಜನವಸತಿ ಪ್ರದೇಶದಲ್ಲಿಯೂ ಅಡ್ಡಾಡಿ ಭೀತಿ ಹುಟ್ಟಿಸಿದೆ. ಕಾಡುಕೋಣ ಮಾತ್ರವಲ್ಲದೇ ಚಿರತೆ, ಹೆಬ್ಬಾವು ಹಾಗೂ ಜಿಂಕೆ ಕಾಟವನ್ನು ಇಲ್ಲಿನ ಜನರು ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

Comments are closed.