ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಇನ್‍ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು, ಅವರು ಇಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಇನ್‍ಸ್ಟಾಗ್ರಾಂನಲ್ಲಿ ಕಿಚ್ಚ ಸುದೀಪ್ ಇಬ್ಬರನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ ಒಬ್ಬರು ಅವರ ಮಗಳು ಸಾನ್ವಿ ಸುದೀಪ್ ಆಗಿದ್ದು, ಮತ್ತೊಬ್ಬರು ಡ್ಯಾರೇನ್‍ಸೇನ್‍ಟೋಫಂಟಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಡ್ಯಾರೇನ್‍ಸೇನ್‍ಟೋಫಂಟಿ ಆರ್ಟಿಸ್ಟ್ ಫೋಟೋಗ್ರಾಫರ್ ಆಗಿದ್ದು, ಫ್ಯಾಶನ್, ಅಡ್ವಟೈಸಿಂಗ್ ಫೋಟೋಗ್ರಾಫರ್ ಆಗಿದ್ದಾರೆ.
ಸುದೀಪ್ ಇನ್‍ಸ್ಟಾಗ್ರಾಂನಲ್ಲಿ ಹೆಚ್ಚು ಪೋಸ್ಟ್ ಹಾಕುತ್ತಿಲ್ಲ. ಕೇವಲ ಬಿಗ್ ಬಾಸ್ ಕಾರ್ಯಕ್ರಮ, ದಿ ವಿಲನ್ ಸೇರಿದಂತೆ ತಮ್ಮ ಸಿನಿಮಾಗಳ ಮಾಹಿತಿ ಸೇರಿ ಇದೂವರೆಗೆ ಒಟ್ಟು 54 ಪೋಸ್ಟ್ ಗಳನ್ನು ಮಾತ್ರ ಹಾಕಿದ್ದಾರೆ.
ಟ್ವಿಟ್ಟರಿನಲ್ಲಿ 19,73,087ಕ್ಕೂ ಹೆಚ್ಚು ಫಾಲೋವರ್ಸ್ ಗಳಿದ್ದು, ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್(ರಿಜಿಸ್ಟರ್) ಫೇಸ್ ಬುಕ್ ಪೇಜನ್ನು 14 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
Comments are closed.