ಕುಂದಾಪುರ: ಪತ್ರಕರ್ತರ ಸೋಗಿನಲ್ಲಿ ಗುಜರಿ ಅಂಗಡಿ ಮಾಲಿಕನಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಕೋಟೇಶ್ವರ ಹಳೆಅಳಿವೆ ಬೀಚ್ ರಸ್ತೆ ನಿವಾಸಿ ಪಾರೂಕ್(42) ತನ್ನ ಮನೆಯ ಪಕ್ಕದಲ್ಲಿ ಎಫ್.ಎಂ. ಪ್ಲಾಸ್ಟಿಕ್ ಎಂಬ ಹೆಸರಿನಲ್ಲಿ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ನಡೆಸಿಕೊಂಡಿದ್ದು ಎ.9ರಂದು ಫ್ಯಾಕ್ಟರಿಯಲ್ಲಿರುವಾಗ ಆರೋಪಿತರಾದ ಲೋಕೇಶ, ಧರ್ಮೆಂದ್ರ, ಮಂಜುನಾಥ, ವಿಕ್ಕಿ @ ವಿಕ್ರಮ ಎನ್ನುವವರು ಮಾರುತಿ 800 ಕಾರಿನಲ್ಲಿ ಬಂದು ‘ನಾವು ಪ್ರೆಸ್ಸಿನವರು, ನಾವು ರೈಡ್ ಮಾಡುವವರು, ನೀವು ಗ್ಲುಕೋಸ್ ಬಾಟಲ್‌ನ್ನು ತೆಗೆದುಕೊಳ್ಳಬಾರದು’ ಎಂದು ಬೆದರಿಸಿ ಅಲ್ಲಿಯೇ ಬದಿಯಲ್ಲಿ ಚೀಲದಲ್ಲಿದ್ದ ಬಾಟಲಿಗಳನ್ನು ಬಿಸಾಡಿ ವೀಡಿಯೋ ಮಾಡಿ 1 ಲಕ್ಷ ರೂಪಾಯಿ ಹಣ ಕೊಡದಿದ್ದರೆ ಆಫೀಸರ್‌ಗೆ ಹೇಳಿ ನ್ಯೂಸ್ ಪೇಪರ್‌ನಲ್ಲಿ ಹಾಕುತ್ತೇವೆ ಎಂದು ಬೆದರಿಸಿ ಹಣ ಬೇಡಿಕೆ ಇಟ್ಟಿದ್ದು, ಪಾರೂಕ್ ರವರಿಂದ 5000 ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದರು.
ಬಳಿಕ ಗುರುವಾರ ಬೆಳಿಗ್ಗೆ ಬಂದ ಆರೋಪಿಗಳು 5000 ರೂಪಾಯಿ ಹಣವನ್ನು ಕಸಿದುಕೊಂಡು ಹೋಗಿದ್ದಲ್ಲದೆ ಪಾರೂಕ್ ರವರನ್ನುದ್ದೇಶಿಸಿ ನಿಮ್ಮ ಫ್ಯಾಕ್ಟರಿಯಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಪೇಪರಿನಲ್ಲಿ ಹಾಕಿ ನಿನ್ನ ಮಾನ ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.